ಈಗಿನ ಡೇಟಿಂಗ್ ಯುಗದಲ್ಲಿ ಅರೇಂಜ್ ಮ್ಯಾರೇಜ್ ಮೇಲೆ ನಂಬಿಕೆ ಕಡಿಮೆಯಾಗಿದೆ. ಬೇರೆಯವರು ಕೊಡಿಸಿದ ಬಟ್ಟೆಗಳನ್ನೇ ನಾವು ಇಷ್ಟಪಡುವುದಿಲ್ಲ. ಇನ್ನು ಮನೆಯವರು ತೋರಿಸಿದ ಹುಡುಗ/ಹುಡುಗಿಯನ್ನು ಮದುವೆಯಾಗುವುದು ಹೇಗೆ ಎನ್ನುವ ಮನೋಭಾವ ಈಗಿನ ಯುವ ಪೀಳಿಗೆಯದ್ದು. ಆದರೆ ಅರೇಂಜ್ ಮ್ಯಾರೇಜ್ ಬಹಳಷ್ಟು ಹಿಂದಿನದ್ದು. ನಮ್ಮ ಕಣ್ಣೆದುರಿಗೆ ಎಷ್ಟೋ ಸಕ್ಸಸ್ಫುಲ್ ಅರೇಂಜ್ ಮ್ಯಾರೇಜ್ಗಳಿವೆ. ಹಾಗಾದರೆ ಅರೇಂಜ್ ಮ್ಯಾರೇಜ್ ಆಗುವುದು ಒಳ್ಳೆಯದಾ? ಇದರಿಂದ ಏನು ಲಾಭಗಳಿವೆ ಇಲ್ಲಿ ನೋಡಿ..
ಇಬ್ಬರೂ ಎಕ್ಸ್ಪ್ಲೋರ್ ಮಾಡಿ: ನಿಮಗೆ ಅವರ ಬಗ್ಗೆ ಚೆನ್ನಾಗಿ ಗೊತ್ತಿರುವುದಿಲ್ಲ, ಅವರಿಗೂ ನಿಮ್ಮ ಬಗ್ಗೆ ಚೆನ್ನಾಗಿ ಗೊತ್ತಿಲ್ಲ. ಇಬ್ಬರೂ ಹೊಸತಾಗಿ ಒಟ್ಟಿಗೆ ಎಲ್ಲವನ್ನೂ ತಿಳಿದುಕೊಳ್ಳಬಹುದು. ಇಷ್ಟಕಷ್ಟಗಳನ್ನು ಒಟ್ಟಿಗೆ ಅನುಭವಿಸಬಹುದು.
ನಂಬಿಕೆಯೇ ಮೂಲ ಮಂತ್ರ: ಮನೆಯವರು ನಿಮಗಾಗಿ ಆರಿಸಿದ ಸಂಗಾತಿಯಾದರೆ ಅವರು ಒಳ್ಳೆಯವರನ್ನೇ ಆರಿಸಿರುತ್ತಾರೆ. ಅವರ ಮೇಲೆ ನಂಬಿಕೆ ಇರಲಿ. ಸಂಗಾತಿಯಾಗಿ ಬರುವವರ ಮೇಲೂ ನಂಬಿಕೆಯಿರಲಿ.ಎಲ್ಲವೂ ಒಳ್ಳೆಯದೇ ಆಗಲಿದೆ.
ನಿಮ್ಮ ಚಾಯ್ಸ್ ತಪ್ಪಾಗಬಹುದು: ಕೆಲವು ಹುಡುಗ ಅಥವಾ ಹುಡುಗಿಯರು ಮದುವೆಗೆ ಮುನ್ನ ಪ್ರೇಮಿಗಳಾಗಿರುವಾಗ ಒಂದು ರೀತಿ ಇರುತ್ತಾರೆ. ಇನ್ನು ಮದುವೆಯಾದ ನಂತರ ಇನ್ನೊಂದು ರೀತಿ ಇರುತ್ತಾರೆ. ಆಗ ನಾನು ಮಾಡಿದ ಚಾಯ್ಸ್ ಸರಿ ಇಲ್ಲ ಎಂದು ನಿಮಗನಿಸಬಹುದು.
ನಿಮ್ಮ ಸ್ಟ್ರೆಂಥ್ ನಿಮ್ಮ ಫ್ಯಾಮಿಲಿ: ಲವ್ ಮ್ಯಾರೇಜ್ಗಳೆಲ್ಲವೂ ಕೆಟ್ಟವು ಎಂದು ಹೇಳಲಾಗುವುದಿಲ್ಲ. ಕೆಲವೊಮ್ಮೆ ಮದುವೆಯ ನಂತರ ತೊಂದರೆ ಆದರೆ ಮನೆಯಲ್ಲಿ ನಿಮ್ಮ ಸಪೋರ್ಟ್ಗೆ ಯಾರೂ ಇರುವುದಿಲ್ಲ. ಅರೇಂಜ್ ಮ್ಯಾರೇಜ್ನಲ್ಲಿ ನಿಮ್ಮ ಫ್ಯಾಮಿಲಿ ನಿಮ್ಮ ಜೊತೆಗೆ ಸದಾ ಇರುತ್ತದೆ. ನಿಮ್ಮ ಮಧ್ಯೆ ಸಮಸ್ಯೆ ಬಂದರೆ ಅವರು ಪರಿಹರಿಸುತ್ತಾರೆ. ನಿಮ್ಮನ್ನು ಜೋಡಿಸಿ ಇಟ್ಟುಕೊಳ್ಳುತ್ತಾರೆ.
ನಿಮ್ಮ ಸಂಗಾತಿಯನ್ನು ಎಲ್ಲಿ ಹುಡುಕುತ್ತೀರಾ?: ಹೌದು ನೀವು ಮದುವೆಯಾಗ ಬಯಸುವ ಹುಡುಗ ಅಥವಾ ಹುಡುಗಿ ನಿಮಗೆಲ್ಲಿ ಸಿಗುತ್ತಾರೆ? ಲವ್ ಆದರೆ ಅದು ಬೇರೆ ಎನ್ನಬಹುದು. ಆದರೆ ಮದುವೆ ವಯಸ್ಸಿಗೆ ಬಂದ ಮೇಲೆ ಲವ್ ಎನ್ನುವ ವಿಷಯ ಸ್ವಲ್ಪ ಕಷ್ಟವೇ ಹೌದು. ಮನೆಯವರೇ ನಿಮಗೆ ಇಷ್ಟವಾಗುವಂಥ ಸಂಗಾತಿ ನಿಮಗೆ ತೋರಿಸುವಾಗ ಮತ್ತೇಕೆ ಬೇರೆ ಯೋಚನೆ ಅಲ್ಲವಾ?
ವಿಭಿನ್ನತೆಯಲ್ಲಿ ಪ್ರೀತಿಯಿದೆ: ಎಷ್ಟೋ ಜನ ನಾವಿಬ್ಬರೂ ಒಂದೇ ರೀತಿ ಇದ್ದೇವೆ. ಅದಕ್ಕಾಗಿ ನಮ್ಮಲ್ಲಿ ಹೆಚ್ಚ ಅರ್ಥ ಮಾಡಿಕೊಳ್ಳುವ ಗುಣ ಇದೆ. ಅಲ್ಲದೇ ನಮ್ಮ ಕಂಪ್ಯಾಟಿಬಲಿಟಿ ಹೆಚ್ಚು ಅಂದುಕೊಳ್ಳುತ್ತಾರೆ. ಆದರೆ ಇದು ಹೀಗೆ ಅಲ್ಲ, ಇಬ್ಬರೂ ವಿಭಿನ್ನ ರುಚಿ,ಗುಣವುಳ್ಳವರಾಗಿದ್ದರೂ ಅದನ್ನು ಒಪ್ಪಿ ಪ್ರೀತಿಸುವುದು ಇನ್ನೂ ಅರ್ಥಗರ್ಭಿತವಾಗಿರುತ್ತದೆ. ನಿಮಗೆ ಟ್ರಾವೆಲಿಂಗ್ ಇಷ್ಟ ಆದರೆ ಆಕೆಗೆ ಶಾಪಿಂಗ್ ಇಷ್ಟ. ಅವಳು ನಿಮ್ಮ ಜೊತೆ ಟ್ರಿಪ್ ಮಾಡಲು ಬರಲಿಲ್ಲ ಎಂದು ನೀವು ಬೇಸರಿಸಿಕೊಳ್ಳದೆ ನಿಮ್ಮ ಸ್ನೇಹಿತರ ಜೊತೆ ನೀವು ಹೋಗಿ. ಇದನ್ನು ಅವಳೂ ಒಪ್ಪಬೇಕು. ಒಬ್ಬರ ಸಂತೋಷದಲ್ಲಿ ಇನ್ನೊಬ್ಬರು ಸಂತೋಷ ಕಾಣಬೇಕು.