Sunday, August 14, 2022

Latest Posts

ಅರ್ಕಾವತಿ ನದಿಗೆ ಜೀವಕಳೆಗೆ ೨೦೦ ಕೋಟಿ ರೂ ಯೋಜನೆಗೆ ಅಂದಾಜು ವೆಚ್ಚ

ರಾಮನಗರ: ನಗರದ ಮಧ್ಯಭಾಗದಲ್ಲಿ ಹರಿಯುತ್ತಿರುವ ಅರ್ಕಾವತಿ ನದಿ ಯುಜಿಡಿ ನೀರಿನಮಿಶ್ರಣದಿಂದ ಸಂಪೂರ್ಣ ಕಲುಷಿತಗೊಂಡಿದ್ದು ಇದರ ಪುನಶ್ವೇತನಕ್ಕೆ ರಾಜ್ಯ ಸರ್ಕಾರ ಮತ್ತು ಜಿಲ್ಲೆಯ ಬಿಜೆಪಿ ಮುಖಂಡರು ಕಂಕಣಬದ್ಧರಾಗಿದ್ದು ವಿವಿದ ಇಲಾಖೆಗಳ ಸಹಕಾರದಿಂದ ಸುಮಾರು ೨೦೦ ಕೋಟಿ ರೂ. ವೆಚ್ಚದಲ್ಲಿ ಅರ್ಕಾವತಿ ನದಿ ಪಾತ್ರದ ಸಂಪೂರ್ಣ ಶುದ್ಧೀಕರಣ ಯೋಜನೆಗೆ ನಗರಾಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಇಂದು ನದಿಯಲ್ಲಿ ಅರ್ಕಾವತಿ ನದಿ ಪುನಶ್ಚೇತನ ಟ್ರಸ್ಟ್ ವತಿಯಿಂದ ಸಾಂಕೇತಿಕ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ಬಿಡದಿ ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ವರದರಾಜುಗೌಡ ಅವರು ತಿಳಿಸಿದರು.

ಮುಂದುವರೆದು ಅವರು ಮಾತನಾಡಿ  ಕಳೆದ ಐದುತಿಂಗಳ ಹಿಂದೆಯೇ ಭೂಮಿಪೂಜೆಗೆ ತೀರ್ಮಾನಿಸಲಾಗಿತ್ತು.ಆದರೆ ಕರೋನಾ ಕಾರಣದಿಂದ ಜಿಪಂ ಕೆಡಿಪಿ ಸದಸ್ಯಎಂ.ರುದ್ರೇಶ್ ಅವರ ಮಾರ್ಗದರ್ಶನದಲ್ಲಿ ಇಂದು ಪೂಜೆ ನೆರವೇರಿಸಲಾಗಿದೆ.

ಉಪ ಮುಖ್ಯಮಂತ್ರಿ ಡಾ.ಸಿ.ಎಸ್.ಅಶ್ವಥ್ಥನಾರಾಯಣಗೌಡ ಮತ್ತು ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜು ಅವರ ಮಾರ್ಗದರ್ಶನದಂತೆ ಮಂಚನಬೆಲೆ ಅರ್ಕಾವತಿ ಡ್ಯಾಂನಿoದ ಕನಕಪುರ ಸಂಗಮದವರೆಗೆ ಅರ್ಕಾವತಿ ನದಿಪಾತ್ರದ ಪುನಶ್ಚೇತನ ನೀಡಲು ಇಂದಿನ ಕಾರ್ಯಕ್ರಮ ನಡೆಸುವಂತೆ ಸೂಚನೆ ನೀಡಿದ್ದಾರೆ.

ಅರ್ಕಾವತಿ ನದಿಪಾತ್ರದ ಎರಡೂ ಕಡೆ ಗ್ರಾಮಾಂತರ ಪ್ರದೇಶದಲ್ಲೂ ಈ ನದಿಗೆ ಕಲುಷಿತ ನೀರು ಬಿಟ್ಟಿರುವುದರಿಂದ ಆಯಾ ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆಯ ಅನುದಾನ ಬಳಸಿ ೧೬ ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ ನದಿ ಪುನಶ್ಚೇತನ ಕಾರ್ಯಕ್ರಮ ನಡೆಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಮತ್ತು ಜಿಲ್ಲಾಧಿಕಾರಿಗಳಾದ ಎಂ.ಎಸ್.ಅರ್ಚನಾ ಅವರು ತಿಳಿಸಿದ್ದಾರೆ ಎಂದರು.

ಬರುವ ಶುಕ್ರವಾರದಂದು ಉಪ ಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ನಗರಾಭಿವೃದ್ದಿ ಸಚಿವರಾದ ಬೈರತಿ ಬಸವರಾಜು ಮತ್ತು ಪೌರಾಡಳಿತ ಇಲಾಖೆ ಸಚಿವರಾದ ನಾರಾಯಣಗೌಡ ಅವರು ಅರ್ಕಾವತಿ ನದಿ ಪುನಶ್ಚೇತನಕ್ಕೆ ವಿಧ್ಯುಕ್ತವಾಗಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ನಾಲ್ಕು ಹಿಟಾಚಿ, ೧೦ ಟಿಪ್ಪರ್‌ಗಳು, ಡೋಜರ್‌ಗಳು ಸೇರಿದಂತೆ ಕಾಮಗಾರಿಗೆ ಬೇಕಾಗುವ ಎಲ್ಲಾ ಯಂತ್ರಗಳು ಕಾರ್ಯ ನಿರ್ವಹಿಸಲಿವೆ.

ನಾಲ್ಕು ಇಲಾಖೆಗಳು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಗ್ರಾಮಾಂತರ ನೀರು ಸರಬರಾಜು ಇಲಾಖೆ ವತಿಯಿಂದ ಅಂದಾಜು ೯೩ ಕೋಟಿ ರೂ.ಗಳ ಕ್ರಿಯಾ ಯೋಜನೆ ತಯಾರು ಮಾಡಿದ್ದಾರೆ. ಕೈಲಾಂಚ ಹೋಬಳಿಯ ಬಳಿ ಇರುವ ಹುಣಸನಹಳ್ಳಿ ಬಳಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಿದ್ದು, ನದಿಯಲ್ಲಿ ಬರುವ ಕೊಳಚೆ ನೀರನ್ನು ಈ ಘಟಕದ ಮೂಲಕ ಶುದ್ಧೀಕರಿಸಿ ಮತ್ತೆ ನದಿಗೆ ಬಿಡಲಾಗುವುದು.
ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಾಮನಗರ, ಬಿಡದಿ-ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರ, ಕನಕಪುರ ಯೋಜನಾ ಪ್ರಾಧಿಕಾರದ ವತಿಯಿಂದ ನದಿಯ ಸುಂದರೀಕರಣ ಮಾಡಲು ಅಲ್ಲಲ್ಲಿ ಉದ್ಯಾನವನ, ಆಟದ ಮೈದಾನ, ತಡೆಗೋಡೆ ನಿರ್ಮಾಣ ಮಾಡಲಾಗುವುದು.

ಕಾವೇರಿ ನೀರಾವರಿ ನಿಗಮದವರು ನದಿಯ ಅಲ್ಲಲ್ಲಿ ಚೆಕ್‌ಡ್ಯಾಂಗಳ ನಿರ್ಮಾಣ ಮಾಡಲು ಒಪ್ಪಿದ್ದಾರೆ. ಇದ-ಕ್ಕೆ ಈಗಾಗಲೇ ಕ್ರಿಯಾಯೋಜನೆ ತಯಾರಾಗಿದೆ.ಒಟ್ಟಾರೆ ಅಂದಾಜು ೨೦೦ ಕೋಟಿ ರೂ.ಗಳ ವೆಚ್ಚದ ಸಂಪೂರ್ಣ ಕಾಮಗಾರಿಗಳಿಗೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು.

ಒಂದು ತಿಂಗಳೊಳಗೆ ನಗರದ ೧೧ ವಾರ್ಡುಗಳಿಗೆ ಶುದ್ಧ ಕುಡಿಯುವ ನೀರು ದೊರೆಯಲಿದೆ. ಇದಕ್ಕಾಗಿ ಫಿಲ್ಟರ್‌ಗಳನ್ನು ಅಳವಡಿಸಲಾಗುತ್ತಿದೆ’ ಎಂದು ತಿಳಿಸಿದರು. ಭೂಮಿಪೂಜೆ ಸಮಾರಂಭದಲ್ಲಿ ರಾಮನಗರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮುರುಳೀಧರ್ ಹೆಚ್.ಎಸ್, ಕನಕಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್, ರಾ.ಚ.ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಆರ್.ನಾಗರಾಜು, ರಾ.ಚ.ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ.ಎನ್.ಆರ್.ವೆಂಕಟೇಶ್,ರಾಮನಗರ ಯೋಜನಾ ಪ್ರಾಧಿಕಾರದ ನಿರ್ದೇಶಕರಾದ ಕಾಳಯ್ಯ, ರಾಘವೇಂದ್ರ, ನಾಗರಾಜು(ದಿಣ್ಣ), ತಾಲ್ಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್, ಅರ್ಕಾವತಿ ಪುನಶ್ಚೇತನ, ಟ್ರಸ್ಟ್ನ ಸದಸ್ಯರಾದ ಅಮಿತ್, ಪವನ್‌ಗೌಡ, ನಾಗಚಂದ್ರ,ಶ್ರೀನಿವಾಸ್, ಮಾಜಿ ನಗರಸಭಾ ಸದಸ್ಯ ಬಿ.ನಾಗೇಶ್, ಬಿಜೆಪಿ ಮುಖಂಡರಾದ ಜಿ.ವಿ.ಪದ್ಮನಾಭ್, ಆರ್.ವಿ.ಶೇಖರ್,ರಮೇಶ್(ನಗರ), ನಾಗಣ್ಣ(ಹಾರೋಹಳ್ಳಿ), ಅರ್ಕೇಶ್ವರಸ್ವಾಮಿ ದೇವಾಲಯದ ಪಾರುಪತ್ತೇದಾರ ಮಧುರೈ ವೀರನ್, ಧರ್ಮದರ್ಶಿ ಆರ್.ಜಿ.ಚಂದ್ರಶೇಖರ್, ಬಿಜೆಪಿ ಮುಖಂಡರಾದ ದೇವಿಕಾ(ಮಹಿಳಾ ಘಟಕ) ಟಿಎಪಿಸಿಎಂ ಸದಸ್ಯ ಚಿಕ್ಕಣ್ಣ, ಸೊಂಟೇನಹಳ್ಳಿ ಗೋಪಿ, ನಾಗರಾಜು(ಹಾರೋಹಳ್ಳಿ), ಶ್ರೀನಿವಾಸ್ (ಸಾತನೂರು), ಚಂದ್ರು (ಹಾರೋಹಳ್ಳಿ), ಗಿರೀಶ್ (ಹಾರೋಹಳ್ಳಿ), ರಾಮನಗರ ಎಪಿಎಂಸಿ ಸದಸ್ಯ ಮಹದೇವಯ್ಯ, ಮರಳವಾಡಿ ಚಂದ್ರು, ಗೋಪಿ(ರಾಮನಗರ), ಕಗ್ಗಲಹಳ್ಳಿ ಮಹದೇವಯ್ಯ ಸೇರಿದಂತೆ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss