ಮಂಡ್ಯ: ಅರ್ಚರನ್ನು ಕೊಲೆ ಮಾಡಿ ಹುಂಡಿ ಇತರೆ ವಸ್ತುಗಳನ್ನು ಕಳವು ಮಾಡಿರುವ ದರೋಡೆಕೋರರನ್ನು ಶೀಘ್ರ ಬಂಧಿಸಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದರು.
ನಗರದ ಅರ್ಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಮೃತ ಅರ್ಚಕರ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯ ಬಗ್ಗೆ ನೋವು ತಂದಿದೆ. ಇದರ ಯಾರೇ ಇದ್ದರೂ ಕೂಡಲೇ ಪತ್ತೆ ಕಾನೂನು ಕ್ರಮ ಜರುಗಿಸಲಾಗುವುದು. ಮೃತರ ಕುಟುಂಬದವರ ಜೊತೆ ಸರ್ಕಾರ ಇದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪರಿಹಾರ ಘೋಷಿಸಿದ್ದು, ಅದರಂತೆ ತಲಾ 5 ಲಕ್ಷ ರೂ., ಅಂತ್ಯ ಸಂಸ್ಕಾರಕ್ಕೆ 10 ಸಾವಿರ ರೂ. ಹಾಗೂ ಕೇಂದ್ರದ 20 ಸಾವಿರ ರೂ. ಪರಿಹಾರವನ್ನು ನೀಡಲಾಗಿದೆ. ಅಲ್ಲದೆ, ಪ್ರತೀ ತಿಂಗಳು ಮೃತ ಕುಟುಂಬಗಳಿಗೆ ವಿಧವಾ ವೇತನದ ಪಿಂಚಣಿ ಸೌಲಭ್ಯವನ್ನು ಒದಗಿಸಲಾಗುವುದು ಎಂದರು.
ಘಟನೆ ನಡೆಯಲು ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಮುಜರಾಯಿ ಆಯುಕ್ತರಿಂದ ತನಿಖೆನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಅರ್ಕೇಶ್ವರ ದೇವಾಲಯ ವಾರ್ಷಿಕ 25 ಲಕ್ಷ ರೂ. ವರಮಾನವಿದ್ದು, ಬಿ ಗ್ರೇಡ್ನಲ್ಲಿದೆ. ಅದನ್ನು ಎ ಗ್ರೇಡ್ಗೆ ಸೇರಿಸಲು ಪ್ರಸ್ತಾವನೆ ಬಂದಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಳೆದ 8 ತಿಂಗಳಿನಿಂದ ಹುಂಡಿಯ ಹಣ ಎಣಿಕೆ ಮಾಡಿರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿಯೇ ಕಳ್ಳತನ ನಡೆದಿರಬಹುದು. ಅಲ್ಲದೆ, ಘಟನೆ ನಡೆಯುವ ರಾತ್ರಿ ಪೆÇಲೀಸರು ಬೀಟ್ ಬಂದಿದ್ದಾರೆ. ಆ ನಂತರ ಕಳ್ಳತನ ನಡೆದಿರಬಹುದು ಎನ್ನಲಾಗುತ್ತಿದೆ. ಎಲ್ಲ ರೀತಿಯಿಂದಲೂ ಸೂಕ್ತ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು.