Monday, July 4, 2022

Latest Posts

ಅರ್ಚಕರಿಗಿಲ್ಲದ ಸಾಂಪ್ರದಾಯಿಕ ಉಡುಗೆ ಭಕ್ತರಿಗಷ್ಟೇ ಏಕೆ?: ತೃಪ್ತಿ ದೇಸಾಯಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

“ಸಾಂಪ್ರದಾಯಿಕ ವಸ್ತ್ರ ಧರಿಸಿ ದೇವಸ್ಥಾನಕ್ಕೆ ಬರಬೇಕೆಂಬ ನಿಯಮ ಏಕೆ ಭಕ್ತರಿಗೆ ಮಾತ್ರ ಅನ್ವಯವಾಗಬೇಕು, ಇದೇ ನಿಯಮ ಅರ್ಚಕರಿಗೆ, ಪೂಜಾರಿಗಳಿಗೇಕೆ ಅನ್ವಯವಾಗಬಾರದು” ಎಂದು ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಅವರು ಶಿರಡಿ ಸಾಯಿಬಾಬಾ ದೇವಾಲಯದ ಟ್ರಸ್ಟ್‌ನವರನ್ನು ಪ್ರಶ್ನಿಸಿದ್ದಾರೆ.

ಸುಸಂಸ್ಕೃತ ರೀತಿಯಲ್ಲಿ ವಸ್ತ್ರ ಧರಿಸಿ ಬರಬೇಕೆಂದು ಶಿರಡಿ ಸಾಯಿಬಾಬಾ ದೇವಾಲಯ ಟ್ರಸ್ಟ್ ಬೋರ್ಡ್ ಹಾಕಿರುವ ಹಿನ್ನೆಲೆಯಲ್ಲಿ ವಿಡಿಯೋ ಸಂದೇಶ ರವಾನಿಸಿರುವ ತೃಪ್ತಿ ಅವರು ಶಿರಡಿ ದೇವಾಲಯದಲ್ಲಿ ಸುಸಂಸ್ಕೃತ ರೀತಿಯಲ್ಲಿ ಉಡುಗೆ ಧರಿಸಿ ಬರಬೇಕೆಂದು ಫಲಕಗಳನ್ನು ಹಾಕಲಾಗಿದೆ, ಇಂತಹ ಬೋರ್ಡ್ ಗಳನ್ನು ಹಾಕುವ ಮೂಲಕ ಭಕ್ತರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ. ದೇವಾಲಯ ಟ್ರಸ್ಟ್ ಈ ಫಲಕಗಳನ್ನು ತೆಗೆಯದಿದ್ದರೇ ನಾವೇ ಶಿರಡಿಗೆ ಹೋಗಿ ಫಲಕಗಳನ್ನು ತೆಗೆದು ಹಾಕುವುದಾಗಿ ತಿಳಿಸಿದ್ದಾರೆ.

ವಿಡಿಯೊ ಸಂದೇಶವೊಂದರಲ್ಲಿ ಟ್ರಸ್ಟ್‌ನ ಈ ನಡೆಯನ್ನು ಪ್ರಶ್ನಿಸಿರುವ ತೃಪ್ತಿ ದೇಸಾಯಿ, ಇದು ದೇವಾಲಯದ ಮಂಡಳಿಯವರು ಭಕ್ತರಿಗೆ ಮಾಡುತ್ತಿರುವ ಅವಮಾನ ಹಾಗೂ ಅವರಿಗೆ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಎಂದು ದೂರಿದ್ದಾರೆ. ‘ಈ ನಿಯಮಗಳನ್ನು ತೆಗೆಯದಿದ್ದರೆ, ನಾನು ನನ್ನ ಇತರೆ ಹೋರಾಟಗಾರರೊಂದಿಗೆ ಶಿರಡಿಗೆ ಬಂದು, ಆ ಕೆಲಸ ಮಾಡುತ್ತೇವೆ’ ಎಂದು ಎಚ್ಚರಿಸಿದ್ದಾರೆ.

ದೇವಾಲಯಗಳ ಅರ್ಚಕರು ಮತ್ತು ಪೂಜಾರಿಗಳು ಅರ್ಧ ಬಟ್ಟೆ ಧರಿಸಿರುತ್ತಾರೆ, ಅವರಿಗಿಲ್ಲದ ವಸ್ತ್ರ ಸಂಹಿತೆ ಕೇವಲ ಭಕ್ತರಿಗೆ ಮಾತ್ರ ಏಕೆ ಎಂದು ತೃಪ್ತಿಯವರು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸ ಶ್ರೀ ಸಾಯಿಬಾಬಾ ಸಂಸ್ಥಾನ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾನ್ಹುರಾಜ್‌ ಬಗಟೆ ಅವರು , ‘ದೇವರ ದರ್ಶನಕ್ಕೆ ಬರುವರು ಸಾಂಪ್ರದಾಯಿಕ ಉಡುಗೆಯೊಂದಿಗೆ ಆಗಮಿಸುವಂತೆ ಭಕ್ತರಲ್ಲಿ ಮನವಿ ಮಾಡಿದ್ದೇವೆಯೇ ಹೊರತು ಯಾವುದೇ ವಸ್ತ್ರ ಸಂಹಿತೆಯನ್ನು ಹೇರಿಲ್ಲ’ ಎಂದಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss