Thursday, July 7, 2022

Latest Posts

ಅರ್ಚಕರಿಗೆ ಸೋಂಕು| ಭಕ್ತರ ದರ್ಶನಕ್ಕೆ ಬ್ರೇಕ್ ಹಾಕಿ ಟಿಟಿಡಿ ಅಧಿಕಾರಿಗಳಿಗೆ ಮೊರೆ

ತಿರುಮಲ (ಆಂಧ್ರ): ತಿರುಪತಿ ತಿಮ್ಮಪ್ಪನ ದೇವಾಲಯದ ಹದಿನೈದಕ್ಕೂ ಅಧಿಕ ಮಂದಿ ಅರ್ಚಕರಿಗೆ ಕೋವಿಡ್ ಸೋಂಕು ಹರಡಿದ್ದು ಸದ್ಯ ಸಾರ್ವತ್ರಿಕ ದರ್ಶನ ಸ್ಥಗಿತಗೊಳಿಸಲು ಪ್ರಧಾನ ಅರ್ಚಕರು ಟಿಟಿಡಿ ಆಡಳಿತ ವರ್ಗಕ್ಕೆ ಮನವಿ ಮಾಡಿದ್ದಾರೆ.

ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಂದ ಸೋಂಕು ಹರಡುವ ಭೀತಿ ಉಂಟಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಸಾರ್ವತ್ರಿಕ ದರ್ಶನ ಬೇಡ. ದೇವರ ಕೈಂಕರ್ಯದಲ್ಲಿ ತೊಡಗಿರುವ ಎಲ್ಲ ಅರ್ಚಕರೂ ಸೋಂಕಿತರಾದಲ್ಲಿ ತಿಮ್ಮಪ್ಪನ ನಿತ್ಯಸೇವೆಗೂ ಅಡ್ಡಿಯಾಗುತ್ತೆ ಎಂದು ಪ್ರಧಾನ ಅರ್ಚಕರಾದ ರಮಣ ದೀಕ್ಷಿತುಲು ಆಡಳಿತ ವರ್ಗಕ್ಕೆ ಮನವಿ ಮಾಡಿದ್ದಾರೆ. ಪ್ರಸ್ತುತ ದೇವಾಲಯದಲ್ಲಿ ಐವತ್ತಕ್ಕೂ ಅಧಿಕ ಮಂದಿ ಅರ್ಚಕರಿದ್ದು ಅವರೆಲ್ಲರೂ ಪಾಳಿಯ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ.

ಒಂದು ತಿಂಗಳ ಹಿಂದೆ ಕೇಂದ್ರ ಹಾಗೂ ಆಂಧ್ರ ಸರ್ಕಾರಗಳು ಲಾಕ್‌ಡೌನ್‌ ಸೂತ್ರ ಸಡಿಲಗೊಳಿಸಿದ ಬಳಿಕ ತಿರುಮಲದಲ್ಲಿ ಭಕ್ತರ ಸಾರ್ವತ್ರಿಕ ದರ್ಶನ ಆರಂಭವಾಗಿದೆ. ಬಾಲಕರು ಮತ್ತು ವೃದ್ಧರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದ್ದರೂ ಅರ್ಚಕ ಸಮುದಾಯಕ್ಕೆ ಸೋಂಕಿನ ಭೀತಿ ಕಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss