ಹೊಸದಿಗಂತ ಆನ್ಲೈನ್ ಡೆಸ್ಕ್:
ಅರ್ಥಶಾಸ್ತ್ರಜ್ಞ ಮಾರಿಯೋ ದ್ರಾಘಿ ಅವರು ಇಟಲಿಯ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಅವರು ಸಂಸತ್ತಿನ ಅತಿ ದೊಡ್ಡ ಗುಂಪಿನ ಹಾಗೂ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇನ್ನು ಮುಂದಿನ ವಾರ ಅವರ ನೇತೃತವದ ಸರಕಾರವು ವಿಶ್ವಾಸ ಮತ ಗಳಿಸಬೇಕಾಗಿದೆ.
‘ಸೂಪರ್ ಮಾರಿಯೋ’ ಖ್ಯಾತಿಯ 73 ವರ್ಷದ ಮಾರಿಯೋ ದ್ರಾಘಿ ಅವರ ನೇತೃತ್ವದಲ್ಲಿ ಇಟಲಿ ಇನ್ನಷ್ಟು ಇತಿಹಾಸ ಬರೆಯಲಿದೆ ಎಂಬ ವಿಶ್ವಾಸವನ್ನು ಪಕ್ಷದ ಪ್ರಮುಖರು ಹಂಚಿಕೊಂಡಿದ್ದಾರೆ. ಇಟಲಿಯಲ್ಲಿ ಕೊರೋನಾ ತಾಂಡವವಾಡುತ್ತಿದ್ದು, ಈಗಾಗಲೇ 93 ಸಾವಿರ ಮಂದಿಯನ್ನು ಬಲಿತೆಗೆದುಕೊಂಡಿದೆ. ಈ ಅವಧಿಯಲ್ಲಿಯೇ ಅಧಿಕಾರ ಸ್ವೀಕರಿಸಿರುವ ದ್ರಾಘಿಗೆ ಇದೂ ಒಂದು ಸವಾಲಾಗಿ ಪರಿಣಮಿಸಲಿದೆ.