ಹೊಸ ದಿಗಂತ ಆನ್ ಲೈನ್ ಡೆಸ್ಕ್:
ವಾಹನ ತಯಾರಕ ಮಹೀಂದ್ರಾ&ಮಹೀಂದ್ರಾ ಉತ್ತರ ಅಮೆರಿಕಾದ ತನ್ನ ಉತ್ಪಾದನಾ ಘಟಕಗಳಲ್ಲಿ ಅರ್ಧದಷ್ಟು ನೌಕರರನ್ನು ಕಡಿತಗೊಳಿಸಿದೆ.
ಈ ಬಗ್ಗೆ ರಾಯಿಟರ್ಸ್ ವರದಿ ಮಾಡಿದ್ದು, ಮಹೀಂದ್ರಾ&ಮಹೀಂದ್ರಾ ಉತ್ಪಾದನಾ ಘಟಕದಲ್ಲಿ 2020ರ ಆರಂಭದಲ್ಲಿ 500ಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದರು. ಆದರೆ ಈಗ ಅರ್ಧದಷ್ಟು ಜನರು ಕೆಲಸ ಕಳೆದುಕೊಂಡಿದ್ದಾರೆ ಎಂದು ತಿಳಿಸಿದೆ.
ಕೊರೋನಾ ಸಾಂಕ್ರಾಮಿಕ ರೋಗ ಮತ್ತು ಕಾನೂನಿಗೆ ಸಂಬಂಧಪಟ್ಟಂತೆ ಇರುವ ಕೆಲವು ತೊಂದರೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕಂಪನಿಗೆ ಲಾಭ ತಂದಉ ಕೊಡುವವರನ್ನು ಮಾತ್ರ ಕಂಪನಿ ಉಳಿಸಿಕೊಂಡಿದೆ ಎನ್ನಲಾಗಿದೆ.
ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಕಾನೂನಿಗೆ ಸಂಬಂಧಪಟ್ಟಂತೆ ಇರುವ ತೊಂದರೆಗಳನ್ನು ಇಟ್ಟುಕೊಂಡು ಲಾಭದಲ್ಲಿ ಇರುವ ಅಥವಾ ಮುಂದೆ ಲಾಭ ತಂದುಕೊಡಬಲ್ಲವುಗಳನ್ನು ಮಾತ್ರ ಉಳಿಸಿಕೊಳ್ಳುವ ಉದ್ದೇಶವನ್ನು ಕಂಪನಿಯು ಹೊಂದಿದೆ.
ಕೆಲಸ ಕಳೆದುಕೊಂಡ ನೌಕರರಲ್ಲಿ ಎಂಜಿನಿಯರ್ಗಳು, ಅಧಿಕಾರಿಗಳು ಸೇರಿದ್ದಾರೆ ಎನ್ನಲಾಗಿದೆ.