ಹೊಸದಿಗಂತ ಆನ್ ಲೈನ್ ಡೆಸ್ಕ್, ಮಂಗಳೂರು:
ಮುಂಬೈ-ಡೆಲ್ಲಿ ನಡುವಿನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಗೆಲುವಿಗೆ 201 ರನ್ನುಗಳ ಬೃಹತ್ ಮೊತ್ತದ ಗುರಿ ನೀಡಿದೆ.
ಮುಂಬೈ ಪರ ಇಶಾನ್ ಕಿಶನ್ 30 ಎಸೆತಗಳಲ್ಲಿ 55, ಸೂರ್ಯಕುಮಾರ್ ಯಾದವ್ 38 ಎಸೆತಗಳಲ್ಲಿ 51 ಹಾಗೂ ಕ್ವಿಂಟನ್ ಡಿಕಾಕ್ 40ರನ್ನುಗಳನ್ನು ಪೇರಿಸಿ ತಂಡದ ಮೊತ್ತ 200 ಗಡಿ ದಾಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡೆಲ್ಲಿ ಪರ ರವಿಚಂದ್ರನ್ ಆಶ್ವಿನ್ ಮೂರು ವಿಕೆಟ್ಗಳನ್ನು ಪಡೆದಿದ್ದಾರೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ.