Thursday, July 7, 2022

Latest Posts

ಅಲ್ಸರ್ ಸಮಸ್ಯೆ ಇದ್ದರೆ ಬೇಗ ಗೊತ್ತಾಗೋದೆ ಇಲ್ಲ! ನಿಮ್ಮಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅಲ್ಸರ್ ಇರುವುದು ಖಚಿತ..

ಅಲ್ಸರ್’ನ್ನು ನಿರ್ಲಕ್ಷ ಮಾಡುವುದಕ್ಕೆ ಆಗುವುದಿಲ್ಲ. ಏಕೆಂದರೆ  ಅಲ್ಸರ್ ಎದುರಾದರೆ ತೀವ್ರ ಹೊಟ್ಟೆನೋವು ಬರುತ್ತದೆ. ಒಂದು ವೇಳೆ ಇದನ್ನು ನಿರ್ಲಕ್ಷ ಮಾಡಿದರೆ ಹೊಟ್ಟೆ ತುಂಬ ವ್ಯಾಪಿಸುತ್ತದೆ. ಆಗ ಬಹಳ ಕಷ್ಟಪಡಬೇಕಾಗುತ್ತದೆ. ಈ ಕೆಳಗೆ ಹೇಳಿರುವ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರಲ್ಲಿ ಪರೀಕ್ಷೆ ಮಾಡಿಸಿ. ಸೂಕ್ತ ಚಿಕಿತ್ಸೆ ಪಡೆಯಿರಿ..

ವಾಂತಿ: ತಿಂದ ಆಹಾರವೆಲ್ಲ ವಾಂತಿಯಾಗುತ್ತದೆ. ವಾಂತಿಯಾಗುವಾಗ ಬಹಳ ಕಷ್ಟವೆನಿಸುತ್ತದೆ. ಕೆಲವೊಮ್ಮೆ ರಕ್ತ ವಾಂತಿ ಕೂಡ ಆಗುತ್ತದೆ.

ಹೊಟ್ಟೆನೋವು: ಅಲ್ಸರ್ ಇರುವವರಿಗೆ ಹೊಟ್ಟೆನೋವು ಬಂದೇ ಬರುತ್ತದೆ. ಏಕೆಂದರೆ ಹೊಟ್ಟೆಯೊಳಗೆ ಹುಣ್ಣಾಗುವುದರಿಂದ ಕರುಳಿನಲ್ಲಿ ಆಮ್ಲ ಸೇರಿಕೊಂಡು ಅದು ನೋವಿಗೆ ಕಾರಣವಾಗುತ್ತದೆ.

ಎದೆಯುರಿ: ಆ್ಯಸಿಡಿಟಿ ಸಮಸ್ಯೆ ಇರುವವರಿಗೆ ಹೇಗೆ ಎದೆ ಉರಿ ಬರುತ್ತದೆಯೋ ಹಾಗೆಯೇ ಅಲ್ಸರ್ ಆದವರಿಗೂ ಎದೆ ಉರಿಯಾಗುತ್ತದೆ. ಹುಳಿ ತೇಗು ಬರುತ್ತದೆ.

ಮಲದಲ್ಲಿ ರಕ್ತ: ಅಲ್ಸರ್’ನ ಪ್ರಮುಖ ಲಕ್ಷಣ ಎಂದರೆ ಮಲದಲ್ಲಿ ರಕ್ತ ಹೋಗುವುದು. ಮಲದಲ್ಲಿ ರಕ್ತ ಹೋಗುವುದು ತಿಳಿದ ತಕ್ಷಣ ನಿರ್ಲಕ್ಷ ಮಾಡುವಂತಿಲ್ಲ.

ಬೆನ್ನು ನೋವು: ಅಲ್ಸರ್ ಹುಣ್ಣಿನ ನೋವು ಬೆನ್ನು, ಎದೆಯವರೆಗೂ ವ್ಯಾಪಿಸುತ್ತದೆ. ಬೆನ್ನು, ಎದೆ ವಿಪರೀತ ನೋವಾಗುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss