ಹೊಸದಿಗಂತ ವರದಿ, ವಿಜಯಪುರ:
ಇಲ್ಲಿನ ಪುಲಕೇಶಿ ನಗರದ ನಿರ್ಜನ ಪ್ರದೇಶದಲ್ಲಿ ಅವಧಿ ಮುಗಿದ ಔಷಧಗಳನ್ನು ನಶೆ ಪದಾರ್ಥವನ್ನಾಗಿ, ಬೈಕ್ನಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಮಹ್ಮದಸಾದೀಕ ಸಿಕಂದರಸಾಬ ಭತಗುಣಕಿ (35), ಇಲ್ಲಿನ ಧನವಂತರಿ ಆಸ್ಪತ್ರೆ ಹಿಂಭಾಗದ ನಿವಾಸಿ ಮಹ್ಮದಯುಸೂಫ್ ಮೈನೂದ್ದೀನ್ ಕೊತ್ತಲ (35) ಬಂಧಿತ ಆರೋಪಿಗಳು.
ಈ ಇಬ್ಬರು ಆರೋಪಿಗಳು, 4,16,696 ರೂ.ಗಳ ಮೌಲ್ಯದ ಅವಧಿ ಮುಗಿದ ಔಷಧಿಗಳ ಬಾಟಲಿಗಳನ್ನು ಸಂಗ್ರಹಿಸಿ, ನಶೆ ಪದಾರ್ಥವನ್ನಾಗಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ಈ ಸಂಬಂಧ ಇಲ್ಲಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.