ಬೆಂಗಳೂರು: ಜನವರಿ 16ರಿಂದ ಪ್ರಾರಂಭವಾಗುವ ಅವರೆಕಾಯಿ ಮೇಳವನ್ನು ರದ್ದುಗೊಳಿಸಲು ಕೆಲವರು ಪಾಲಿಕೆಯಲ್ಲಿ ಚರ್ಚೆ ನಡೆಸಿದರು.ಆದರೆ ಬಿಬಿಎಂಪಿ ಮೇಯರ್ ಗೌತಮ್ ಮೇಳಕ್ಕೆ ಸೈ ಎಂದಿದ್ದಾರೆ.
ಸುಪ್ರಸಿದ್ಧ ಅವರೇಕಾಯಿ ಮೇಳಕ್ಕೆ ಇನ್ನು ಒಂದು ವಾರ ಮಾತ್ರ ಬಾಕಿಯಿದೆ. ವಿವಿಪುರಂನ ವಾಸವಿ ಕಾಂಡಿಮೆಂಟ್ಸ್ ಆಯೋಜಿಸುವ ಅವರೆಮೇಳ, ಬೆಂಗಳೂರಿನ ಸಾಂಸ್ಕೃತಿಕ ಮೇಳವಾಗಿದ್ದು ಅದನ್ನು ರದ್ದುಗೊಳಿಸಿವುದಿಲ್ಲವೆಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಜನವರಿ 16ರಿಂದ 26ರವರೆಗೆ ನಡೆಯುವ ಅವರೇಕಾಯಿ ಮೇಳದ ಗಾಸಿಪ್ ಗಳಿಗೆ ಸ್ವತಃ ಮೇಯರ್ ಅವರೆ ಉತ್ತರಿಸಿದ್ದಾರೆ. ಮುಂದೇನಿದ್ದರು ರುಚಿರುಚಿಯಾದ ಅವರೆಕಾಯಿ ರೊಟ್ಟಿ,ಒಬ್ಬಟ್ಟು,ಪಾಯಸ, ಐಸ್ ಕ್ರೀಮ್ ಸೇವಿಸುವುದೊಂದೆ ಸಾರ್ವಜನಿಕರ ಆಸೆಯಾಗಿದೆ.