ಯಾವಾಗಲೂ ಒಂದೇ ರೀತಿ ಪಾಯಸ ತಿಂದು ನಿಮಗೂ ಬೋರ್ ಆಗಿರುತ್ತದೆ. ನೀವೇಕೆ ರವೆ, ಅವಲಕ್ಕಿ ಪಾಯಸ ಟ್ರೈ ಮಾಡಬಾರದು. ಬಹಳ ಸಿಂಪಲ್ ಆಗಿ ಬೇಗ ಮಾಡುವ ರೆಸಿಪಿ. ಈ ಪಾಯಸ ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ. ಹೇಗೆ ಮಾಡೋದು ನೋಡಿ..
ಬೇಕಾಗುವ ಸಾಮಗ್ರಿ:
ರವೆ
ಅವಲಕ್ಕಿ
ಬೆಲ್ಲ
ಹಾಲು
ಏಲಕ್ಕಿ ಪುಡಿ
ತುಪ್ಪ
ಮಾಡುವ ವಿಧಾನ:
ಅವಲಕ್ಕಿ ಅರ್ಧ ಕಪ್, ರವೆ ಕಾಲು ಕಪ್ ತೆಗೆದುಕೊಂಡು ಇವೆರಡನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದುಕೊಳ್ಳಿ.
ನಂತರ ಅದಕ್ಕೆ ಹಾಲು, ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ.
ಕುದಿಯುತ್ತಿರುವಾಗ ಚಿಟಿಕೆ ಏಲಕ್ಕಿ ಹಾಕಿದರೆ ಪಾಯಸ ರೆಡಿ.