Thursday, August 11, 2022

Latest Posts

ಅಶಕ್ತ ಮಹಿಳೆಗೆ ಮಾಸಾಶನ: ವಾಕರ್ ವಿತರಣೆ

ಹೊಸದಿಗಂತ ವರದಿ,ಸೋಮವಾರಪೇಟೆ:

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶಾಂತಳ್ಳಿ ಗ್ರಾಮದ ವಿಕಲಚೇತನ ಮಹಿಳೆಗೆ ಮಾಸಾಶನ ಹಾಗೂ ವಾಕರ್ ವಿತರಿಸಲಾಯಿತು.

ಶಾಂತಳ್ಳಿಯ ನಿರ್ಗತಿಕ ಹಾಗೂ ವಿಕಲಚೇತನ ಮಹಿಳೆಯಾದ ಗಂಗಮ್ಮ ಅವರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಪ್ರತಿ ತಿಂಗಳು ರೂ.750 ಮಾಸಾಶನ ನೀಡಲಾಗುವುದು. ಇದರೊಂದಿಗೆ ನಡೆದಾಡಲು ವಾಕರ್ ನೀಡಲಾಗಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಯೋಜನೆಯ ಮೇಲ್ವಿಚಾರಕ ಸುಬ್ರಹ್ಮಣ್ಯ ತಿಳಿಸಿದರು.

ಈ ಸಂದರ್ಭ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರವೀಣ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss