ಹೊಸದಿಗಂತ ವರದಿ ಮಂಗಳೂರು:
ಅಶ್ವತ್ಥದ ಎಲೆಗಳಲ್ಲಿ ಚಿತ್ರ ಬರೆದು ರಾಜ್ಯದಲ್ಲೇ ಪ್ರಸಿದ್ಧಿ ಪಡೆದ ಮೂಡುಬಿದಿರೆ ಕಲ್ಲಬೆಟ್ಟು ಅಕ್ಷಯ್ ಕೋಟ್ಯಾನ್ ಇವರ ಕೈ ಚಳಕದಿಂದ ಮೂಡಿ ಬಂದ ಬಿಜೆಪಿ ರಾಜ್ಯಾಧ್ಯಕ್ಷ ಜಿಲ್ಲೆಯ ಹೆಮ್ಮೆಯ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಚಿತ್ರವನ್ನು ಅಕ್ಷಯ್ ಸಂಸದರಿಗೆ ನೀಡಿದರು.
ಇದೇ ಸಂದರ್ಭ ಸಂಸದರು ಅಕ್ಷಯ್ ಕೋಟ್ಯಾನ್ ರವರನ್ನು ಅಭಿನಂದಿಸಿದರು. ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಎಂ., ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರ್, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಉಪಸ್ಥಿತರಿದ್ದರು.