Tuesday, August 16, 2022

Latest Posts

ಅಷ್ಟೊಂದು ದುಡ್ಡು ಕೊಟ್ಟು ಹೊಟೇಲ್‌ನಲ್ಲಿ ಮಸಾಲಾ ಪಾಪಡ್ ತಿಂತೀರಾ? ಮನೆಯಲ್ಲಿಯೇ ಪಾಪಡ್  ಮಾಡೋದು ಹೇಗೆ ನೋಡಿ..

ಹೊಟೇಲ್‌ಗಳಿಗೆ ಹೋದಾಗ ಮೊದಲು ಸೂಪ್ ಆರ್ಡರ್ ಮಾಡುತ್ತೇವೆ ಇದಾದ ನಂತರ ಮಸಾಲಾ ಪಾಪಡ್ ಆರ್ಡರ್ ಮಾಡುತ್ತೇವೆ. ಮನೆಯಲ್ಲಿಯೇ ಈಸಿಯಾಗಿ ಮಾಡಬಹುದಾದ ಮಸಾಲಾ ಪಾಪಡ್‌ಗೆ ಅಷ್ಟೊಂದು ದುಡ್ಡು ಕೊಡೊದ್ಯಾಕೆ? ಈಸಿಯಾದ ಮಸಾಲಾ ಪಾಪಡ್ ಮನೆಯಲ್ಲಿಯೇ ಮಾಡಿಕೊಳ್ಳಿ.. ಈಸಿ ರೆಸಿಪಿ ಇಲ್ಲಿದೆ..
ಬೇಕಾಗಿರುವ ಸಾಮಾಗ್ರಿಗಳು

  • ಪಾಪಡ್
  • ಚಾಟ್ ಮಸಾಲಾ
  • ಈರುಳ್ಳಿ
  • ಹಸಿಮೆಣಸು
  • ಟೊಮ್ಯಾಟೊ
  • ನಿಂಬೆ ರಸ
    ಮಾಡುವ ವಿಧಾನ
  • ಮೊದಲು ಪಾಪಡ್ ಚೆನ್ನಾಗಿ ಕರಿಯಿರಿ.
  • ನಂತರ ಚಿಕ್ಕಕೆ ಕತ್ತರಿಸಿದ ಈರುಳ್ಳಿ,ಟೊಮ್ಯಾಟೊ,ಹಸಿಮೆಣಸು ಒಂದು ಬೌಲ್‌ಗೆ ಹಾಕಿ.
  • ಈ ಮಿಶ್ರಣಕ್ಕೆ ಉಪ್ಪು,ಚಾಟ್ ಮಸಾಲಾ ಹಾಕಿ
  • ನಂತರ ಈ ಮಿಶ್ರಣವನ್ನು ಪಾಪಡ್ ಮೇಲೆ ಹರಡಿ ಮೇಲಿನಿಂದ ನಿಂಬೆ ರಸ ಸುರಿದರೆ ಮಸಾಲಾ ಪಾಪಡ್ ರೆಡಿ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss