Saturday, June 25, 2022

Latest Posts

ಅಸ್ತಮಾ ಎಂದರೇನು? ಯಾವ ರೀತಿಯ ಅಸ್ತಮಾಗಳಿವೆ? ಅಸ್ತಮಾ ಇರುವವರು ಹೀಗೆ ನಡೆದುಕೊಳ್ಳಿ..

ಕೆಲವರಿಗೆ ಖಾರ ತಿಂದರೆ, ಇನ್ನು ಕೆಲವರಿಗೆ ಮಂಜು, ತಣ್ಣನೆಯ ಪ್ರದೇಶಗಳಿಗೆ ಹೋದರೆ ಆಗುವುದಿಲ್ಲ ಶೀತ, ಕೆಮ್ಮು, ವೀಜಿಂಗ್ ಆಗುತ್ತದೆ. ನಮ್ಮ ಏರ್‌ವೇ ನ್ಯಾರೋ ಆಗಿ, ಊದಿಕೊಂಡಾಗ ಇದರಲ್ಲಿ ಹೆಚ್ಚು ಕಫ ತುಂಬಿಕೊಂಡು ಉಸಿರಾಟದ ತೊಂದರೆಯಾಗುತ್ತದೆ. ಉಸಿರಾಟದ ತೊಂದರೆ ಜೊತೆಗೆ ಕೆಮ್ಮು,ವೀಜಿಂಗ್ ಹಾಗೂ ದೀರ್ಘ ಉಸಿರಾಟದ ತೊಂದರೆ ಆಗುತ್ತದೆ ಇದನ್ನು ಅಸ್ತಮಾ ಎನ್ನುತ್ತಾರೆ.
ಅಸ್ತಮಾ ಲಕ್ಷಣಗಳೇನು?

 • ದೀರ್ಘ ಉಸಿರಾಟದ ತೊಂದರೆ
 • ಎದೆಯಲ್ಲಿ ನೋವು, ಟೈಟ್ ಆದಂದ ಭಾವನೆ
 • ವೀಜಿಂಗ್, ರಾತ್ರಿ ಮಲಗುವಾಗ ವಿಜಲ್‌ನಂತಾ ಶಬ್ದ ಉಸಿರಾಟದಿಂದ ಬರುವುದು
 • ರಾತ್ರಿ ಉಸಿರಾಟದ ತೊಂದರೆಯಿಂದ ನಿದ್ದೆ ಬಾರದೇ ಇರುವುದು, ಕೆಮ್ಮು
  ಮೂರು ರೀತಿಯ ಅಸ್ತಮಾಗಳಿವೆ
 • ಇಂಡ್ಯೂಸ್ಡ್ ಅಸ್ತಮಾ: ಇದು ವಾತಾವರಣದಲ್ಲಿ ತಂಪಿದ್ದರೆ, ಶೀತ ಆಗುತ್ತದೆ.
 • ಆಕ್ಯುಪೇಶನಲ್ ಅಸ್ತಮಾ: ಕೆಮಿಕಲ್ ದೇಹದ ಒಳಗೆ ಹೋದರೆ, ಮನೆಯ ಧೂಳು ತೆಗೆದರೆ ಬರುವ ಅಸ್ತಮಾ
 • ಅಲರ್ಜಿ ಇಂಡ್ಯೂಸ್ಡ್ ಅಸ್ತಮಾ: ಇದು ಯಾವುದಾದರೂ ವಸ್ತುಗಳಿಂದ ಬರುವ ಅಸ್ತಮಾ ಕೆಲವರಿಗೆ ಹೂವು, ಜಿರಳೆಗಳ ವೇಸ್ಟ್‌ಕೈ ಮೇಲೆ ಬಿದ್ದರೆ ಇದರಿಂದ ಅಲರ್ಜಿಯಾಗಿ ಅಸ್ತಮಾ ಆಗುತ್ತದೆ.
  ಅಸ್ತಮಾ ಇದ್ದವರು ಏನು ಮಾಡಬೇಕು?
 • ಡೈಯಟ್‌ನಲ್ಲಿ ಬದಲಾವಣೆ ಮಾಡಿ: ತೂಕ ಹೆಚ್ಚಿರುವವರಿಗೆ ಅಸ್ತಮ ಸಮಸ್ಯೆ ಕಾಡುತ್ತದೆ, ತೂಕ ಇಳಿಸುವ ಅವಶ್ಯ ಇದೆ. ಹಾಗಾಗಿ ನಿಮ್ಮ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಿ.
 • ಬಾಯಿಂದ ಉಸಿರಾಡಬೇಡಿ: ಕೆಲವರಿಗೆ ಉಸಿರಾಡಲು ಕಷ್ಟ ಆದ ತಕ್ಷಣ ಬಾಯಿಂದ ಉಸಿರಾಡುತ್ತಾರೆ. ಆದರೆ ಈ ರೀತಿ ಮಾಡಬೇಡಿ. ಆದಷ್ಟು ಮೂಗಿನಿಂದಲೆ ಉಸಿರಾಟ ಕ್ರಿಯೆ ನಡೆಯಲಿ. ಬಾಯಿನಿಂದ ಉಸಿರಾಡದಂತ ವ್ಯಾಯಾಮ ಮಾಡಿ. ಅಸ್ತಮಾ ಇರುವವರು ಬಾಯಿಂದ ಉಸಿರಾಡಿದರೆ ನಿಮ್ಮ ಏರ್‌ವೇ ಇನ್ನೂ ಸೆನ್ಸಿಟಿವ್ ಆಗುವ ಸಾಧ್ಯತೆ ಇದೆ.
 • ಆಹಾರ ಕ್ರಮ ಹೀಗಿರಲಿ: ನೀವು ತಿನ್ನುವ ಆಹಾರದಲ್ಲಿ ಶುಂಠಿ, ಬೆಳ್ಳುಳ್ಳಿ, ಜೇನುತುಪ್ಪ ಹಾಗೂ ಕೆಫೀನ್ ಇದ್ದೇ ಇರಲಿ. ಇದು ಅಸ್ತಮಾಗೆ ಸಹಕಾರಿ
 • ಯೋಗ: ಯೋಗ ಮಾಡುವುದರಿಂದ ಉಸಿರಾಟದ ಮೇಲೆ ಗಮನ ಬರುತ್ತದೆ. ಯೋಗಾಸನದ ಪ್ರತಿ ಆಸನವೂ ಉಸಿರಾಟವನ್ನೇ ಕೇಂದ್ರೀಕೃತ ಮಾಡಿಕೊಂಡಿರುವುದರಿಂದ ಇದು ನಿಮಗೆ ಸಹಾಯವಾಗುವುದು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss