Tuesday, July 5, 2022

Latest Posts

ಅಸ್ಸಾಂನಲ್ಲಿ ಮದ್ಯಮಾರಾಟಕ್ಕೆ ಅವಕಾಶ ನೀಡಿದ ಸರ್ಕಾರ: ದಿನಕ್ಕೆ 7 ಗಂಟೆಗಳ ಕಾಲ ಬಾರ್ ಗಳು ಓಪನ್

ಗುವಾಹಟಿ: ದೇಶದಲ್ಲಿ ಕೊರೋನಾ ಲಾಕ್ ಡೌನ್ ವಿಸ್ತರಣೆ ಮಾಡುವ ನಿರ್ಧಾರಗಳ ಮಧ್ಯದಲ್ಲಿ ಅಸ್ಸಾಂ ಮತ್ತು ಮೇಘಾಲಯ ಸರ್ಕಾರಗಳು ತಮ್ಮ ರಾಜ್ಯದಲ್ಲಿ ಮದ್ಯಮಾರಟಕ್ಕೆ ಮುಂದಾಗಿದೆ.

ಸೋಮವಾರದಿಂದ ರಾಜ್ಯದಲ್ಲಿ ಮದ್ಯಮಾರಾಟಕ್ಕೆ ಅವಕಾಶ ನೀಡಿದ ಅಸ್ಸಾಂ ಮತ್ತು ಮೇಘಾಲಯ ಸರ್ಕಾರ, ಮದ್ಯಮಾರಾಟಕ್ಕೆ ಅವಶ್ಯಕವಾದ ಅಂಗಡಿಗಳಿನ ಮೇಲಿನ ನಿರ್ಬಂಧನೆಗಳನ್ನು ತೆರವುಗೊಳಿಸಿದೆ. ಮದ್ಯಮಾರಾಟದ ಅಂಗಡಿಗಳು, ಸಗಟು ಮಾರಾಟ ಕೇಂದ್ರ ಮತ್ತು ತಯಾರಿಕಾ ಘಟಕಗಳು ಇಂದಿನಿಂದ ಕಾರ್ಯನಿರ್ವಹಿಸಲಿದೆ.

ಮೇಘಾಲಯದಲ್ಲಿ ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಮದ್ಯ ಮಾರಾಟದ ಅಂಗಡಿಗಳು ಕಾರ್ಯನಿರ್ವಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸ್ಸಾಂ ನಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮದ್ಯದಂಗಡಿಗಳು ತೆರೆಯಲಿದ್ದು, ಅಂಗಡಿಯಲ್ಲಿ ಕನಿಷ್ಠ ಸಿಬ್ಬಂದಿಗಳು ಮಾತ್ರ ಕೆಲಸಮಾಡಬೇಕು ಎಂದು ರಾಜ್ಯದ ಅಬಕಾರಿ ಇಲಾಖೆ ತಿಳಿಸಿದೆ.

ಈ ಕುರಿತು ಅಬಕಾರಿ ಇಲಾಖೆಯ ಆಯುಕ್ತ ಪ್ರವೀಣ್ ಬಕ್ಷಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರಬರೆದಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss