Tuesday, August 16, 2022

Latest Posts

ಅಸ್ಸಾಂ ಡಿಎಸ್ಪಿ ಆಗಿ ಅಥ್ಲೆಟಿಕ್ ಸ್ಟಾರ್ ಹಿಮಾ ದಾಸ್ ನೇಮಕ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಅಥ್ಲೆಟಿಕ್ ಸ್ಟಾರ್ ಹಿಮಾ ದಾಸ್‌ ಶುಕ್ರವಾರ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರ ಸಮ್ಮುಖದಲ್ಲಿ ಪೊಲೀಸ್ ಉಪ ಅಧೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.
ಈ ವೇಳೆ ಮಾತನಾಡಿದ ದಾಸ್ “ಈ ಕ್ಷಣವು ಬಾಲ್ಯದ ಕನಸು ನನಸಾದ ಸಮಯ” ಎಂದಿದ್ದಾರೆ.
ಸಮಾರಂಭದಲ್ಲಿ ಹಿಮಾ ಅವರಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು. ಈ ವೇಳೆ ಮಾಜಿ ಕೇಂದ್ರ ಕ್ರೀಡಾ ಸಚಿವರಾದ ಸೋನೊವಾಲ್ ಅವರು ರಾಜ್ಯ ಸರ್ಕಾರದ ಉನ್ನತ ಕಾರ್ಯಕರ್ತರು ಮತ್ತು ಪೊಲೀಸ್ ಇಲಾಖೆ ಪರ ಪೊಲೀಸ್ ಮಹಾನಿರ್ದೇಶಕರು ಇದ್ದರು.
ಡಿಎಸ್ಪಿ ಆಗಿ ಸೇರ್ಪಡೆಗೊಂಡ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಹಿಮಾ, ತಾನು ಚಿಕ್ಕವಳಿದ್ದಾಗ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದಾಗಿ ಹೇಳಿಕೊಂಡರು.
“ಇಲ್ಲಿನ ಜನರಿಗೆ ನನ್ನ ಬಗ್ಗೆ ತಿಳಿದಿದೆ, ನಾನಿನ್ನೇನೂ ಹೇಳಲು ಹೋಗುವುದಿಲ್ಲ.ನನ್ನ ಆರಂಭಿಕ ಶಾಲಾ ದಿನಗಳಿಂದಲೂ, ನಾನು ಒಂದು ದಿನ ಪೊಲೀಸ್ ಅಧಿಕಾರಿಯಾಗಬೇಕೆಂಬ ಬಯಕೆಯನ್ನು ಹೊಂದಿದ್ದೆ ಮತ್ತು ನನ್ನ ತಾಯಿಯೂ ಅದನ್ನು ಬಯಸಿದರು. ನಾನು ದುರ್ಗಾಪೂಜೆಯ ಸಮಯದಲ್ಲಿ ಆಟಿಕೆಯ ಬಂದೂಕು ಖರೀದಿಸುತ್ತಿದ್ದೆ, ನನ್ನ ತಾಯಿ ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸಮಾಜಕ್ಕೆ ಒಳ್ಳೆ ಕೆಲಸ ಮಾಡುವಂತೆ ಹೇಳುತ್ತಿದ್ದರು.” ಹಿಮಾ ದಾಸ್ ತಮ್ಮ ಬಾಲ್ಯದ ದಿನಗಳನ್ನು ನೆನೆದರು.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ತಮ್ಮ ಸೇವೆಯೊಂದಿಗೆ ತಮ್ಮ ಕ್ರೀಡೆಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಲು ನಿರಂತರವಾಗಿ ಪ್ರಯತ್ನಿಸುವುದಾಗಿ ಹೇಳಿದರು.
ನಾನು ಕ್ರೀಡೆಯಿಂದಾಗಿ ಎಲ್ಲವನ್ನೂ ಪಡೆದುಕೊಂಡಿದ್ದೇನೆ, ನಾನು ರಾಜ್ಯದ ಕ್ರೀಡೆಗಳ ಸುಧಾರಣೆಗೆ ಕೆಲಸ ಮಾಡಲು ಪ್ರಯತ್ನಿಸುತ್ತೇನೆ ಮತ್ತು ಹರಿಯಾಣದಂತೆಯೇ ಅಸ್ಸಾಂ ಅನ್ನು ದೇಶದ ಅತ್ಯುತ್ತಮಕ್ರೀಡಾ ಪ್ರದರ್ಶನ ನೀಡುವ ರಾಜ್ಯಗಳಲ್ಲಿ ಒಂದನ್ನಾಗಿ ಮಾಡಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss