ಗುವಾಹಟಿ: ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
85 ವರ್ಷದ ಗೊಗೊಯ್ ಅವರು ಮಂಗಳವಾರ ಕೊರೋನಾ ಪರೀಕ್ಷೆ ಮಾಡಿಸಿದ್ದು, ಇಂದು ತಮಗೆ ಕೊರೋನಾ ದೃಢಪಟ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ. ತಮಗೆ ದೃಢಪಟ್ಟಿರುವ ಕೊರೋನಾ ಲಕ್ಷಣಗಳಿಲ್ಲದ್ದಾಗಿದ್ದು, ಯಾವ ತೊಂದರೆಯೂ ಇಲ್ಲ ಎಂದಿದ್ದಾರೆ.
ನನ್ನ ಕೊರೋನಾ ಟೆಸ್ಟ್ ಪಾಸಿಟಿವ್ ಬಂದಿದೆ. ನನ್ನ ಜೊತೆ ಸಂಪರ್ಕ ಹೊಂದಿದ್ದ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ಟ್ವೀಟ್ ಮಾಡಿದ್ದಾರೆ.
ಕೆಲವು ದಿನ ಸೌಮ್ಯವಾದ ನೆಗಡಿ,ಶೀತ ಆಗಿದ್ದು, ಅದರಿಂದಾಗಿ ಕೊರೋನಾ ಪರೀಕ್ಷೆ ಮಾಡಿಸಿದ್ದೇನೆ, ನನ್ನ ಹೆಂಡತಿ ಡಾಲಿಗೆ ಕೊರೋನಾ ನೆಗೆಟಿವ್ ಎಂದು ಹೇಳಿದ್ದಾರೆ.
ಕೆಲವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯಿರಿ ಎನ್ನುತ್ತಿದ್ದಾರೆ. ಇನ್ನು ಕೆಲವರು ಆಸ್ಪತ್ರೆಗೆ ದಾಖಲಾಗುವ ಸಲಹೆ ನೀಡಿದ್ದಾರೆ. ವೈದ್ಯರು ಹೇಳಿದ ಹಾಗೆ ನಾನು ಕೇಳುತ್ತೇನೆ ಎಂದಿದ್ದಾರೆ.
I have been tested Covid 19 positive yesterday. People who came in contact with me during Last few days they should go for Covid test immediately.
— Tarun Gogoi (@tarun_gogoi) August 26, 2020