Wednesday, July 6, 2022

Latest Posts

ಅಹ್ಮದಾಬಾದ್, ಸೂರತ್ ಮೆಟ್ರೋ ರೈಲು ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಇಂದು ಅಹ್ಮದಾಬಾದ್, ಸೂರತ್ ಮೆಟ್ರೋ ರೈಲು ಯೋಜನೆಗೆ ಭೂಮಿ ಪೂಜೆ ನೆರವೇರಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಮೋದಿ, ದೇಶದ 27 ನಗರಗಳಲ್ಲಿ 1000 ಕಿ.ಮೀಗಳಷ್ಟು ಮೆಟ್ರೋ ಜಾಲ ಕಾಮಗಾರಿ ನಡೆಯುತ್ತಿದೆ. ಎನ್ ಡಿಎ ಸರ್ಕಾರ ಮೆಟ್ರೋ ರೈಲು ಬಗ್ಗೆ ಆಧುನಿಕ ಚಿಂತನೆ ಇಲ್ಲ ಎನ್ನುವ ಕಾಲದಲ್ಲಿಯೇ ಮೆಟ್ರೋ ನೀತಿ ಜಾರಿಗೆ ತಂದಿದೆ. ಪ್ರಮುಖ ನಗರಗಳಲ್ಲಿ  ಮೆಟ್ರೋ ರೈಲು ಸೇವೆ ಲಭ್ಯವಾಗುವಂತೆ ಮಾಡಿದೆ ಎಂದು ಹೇಳಿದರು.

ಅಹಮದಾಬಾದ್ ಮೆಟ್ರೋ ರೈಲು ಯೋಜನೆ ಎರಡನೇ ಹಂತವು 28. 25 ಕಿ.ಮೀ ದೂರದಾಗಿದ್ದು ,ಎರಡು ಕಾರಿಡಾರ್ ಹೊಂದಿದೆ. ಸೂರತ್ ಮೆಟ್ರೋ ರೈಲು ಯೋಜನೆ ಒಟ್ಟು 40.35 ಕಿ.ಮೀ ದೂರದಾಗಿದ್ದು, ಇದು ಕೂಡಾ ಎರಡು ಕಾರಿಡಾರ್ ಹೊಂದಿದೆ ಎಂದು ಪ್ರಧಾನಿ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss