Sunday, August 14, 2022

Latest Posts

ಅ.15 ರ ಬಳಿಕ ಪ್ರೌಢ, ಪಿಯುಸಿ ತರಗತಿಗಳು ಆರಂಭಿಸಲು ಶಿಕ್ಷಣ ಇಲಾಖೆ ಚಿಂತನೆ

ಬೆಂಗಳೂರು: ರಾಜ್ಯದಲ್ಲಿ ಶಾಲಾ ಪುನರಾರಂಭಕ್ಕೆ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದ್ದು, ಅಕ್ಟೋಬರ್ 15ರ ನಂತರ ಪ್ರೌಢ ಶಾಲೆ ಹಾಗೂ ಪಿಯುಸಿ ತರಗತಿಗಳು ಆರಂಭಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.
ಈ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್, ಪ್ರೌಢಶಾಲೆ ಹಾಗೂ ಪಿಯು ಉಪನ್ಯಾಸಕರ ಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿದ್ದು, ಹಂತ ಹಂತವಾಗಿ ತರಗತಿಗಳನ್ನ ಆರಂಭಿಸಲು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ನಂತರ ಪರಿಸ್ಥಿತಿ ನೋಡಿಕೊಂಡು 7 ಹಾಗೂ 8ನೇ ತರಗತಿಗಳನ್ನ ಆರಂಭಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಇನ್ನು ಶಾಲಾ ಕಾಲೇಜು ಪುನಾರಾರಂಭದ ಬಗ್ಗೆ ಅಕ್ಟೋಬರ್ 10ರಂದು ಇಲಾಖೆ ಅಂತಿಮವಾಗಿ ನಿರ್ಧಾರ ಕೈಗೊಳ್ಳಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss