ಚಿರಂಜೀವಿ ಸರ್ಜಾ ಅಗಲಿಕೆಯಿಂದ ಕುಟುಂಬ ಇನ್ನೂ ಹೊರಬಂದಿಲ್ಲ. ಇದೀಗ ದುಃಖದಲ್ಲಿರುವ ಕುಟುಂಬಕ್ಕೆ ಖುಷಿ ಪಡುವ ದಿನ ಹತ್ತಿರ ಬಂದಿದೆ.
ಅಕ್ಟೋಬರ್ ೧೭ರಂದು ಚಿರು ಸರ್ಜಾ ಪತ್ನಿ ಮೇಘನಾ ರಾಜ್ ಮಡಿಲಿನಲ್ಲಿ ಮಗುವಿನ ನಗು ಕೇಳಿಸಲಿದೆ. ಆ ನಗುವಿಗಾಗಿ ಇಡೀ ಕುಟುಂಬ ಎದುರು ನೋಡುತ್ತಿದೆ.
ವಿಶೇಷ ಅಂದರೆ ಅಕ್ಟೋಬರ್ ೧೭ ಚಿರಂಜೀವಿ ಸರ್ಜಾ ಹುಟ್ಟಿದ್ದ ದಿನ. ಚಿರು ಹುಟ್ಟಿದ ದಿನದಂದೆ ಚಿರಂಜೀವಿ ಅವರ ಮಗುವಿನ ಜನನದ ಮೂಲಕ ಮರುರೂಪ ನೋಡಲು ಇಡಿ ಸರ್ಜಾ ಕುಟುಂಬ ಕಾಯುತ್ತಿದೆ. ಇದೇ ದಿನ ‘್ರುವ ಸರ್ಜಾ ತನ್ನ ಗಡ್ಡಕ್ಕೆ ಕತ್ತರಿ ಹಾಕುತ್ತಿದ್ದಾರಂತೆ. ಜೊತೆಗೆ ಅದೇ ದಿನ ‘್ರುವ ಸರ್ಜಾ ಸಿನಿಮಾದ ಮುಹೂರ್ತ ಕೂಡ ನಡೆಯುತ್ತಿದೆಯಂತೆ.
ಚಿರಂಜೀವಿ ಸರ್ಜಾ ಇದ್ದಿದ್ದರೆ ೩೫ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೀಗ ಚಿರು ನೆನಪು ಮಾತ್ರ. ಅದರೆ ಅದೇ ವಿಶೇಷ ದಿನದಂದು ಮರಿ ಚಿರು ಸರ್ಜಾ ಆಗಮವಾಗುತ್ತಿರುವುದು ಸರ್ಜಾ ಮತ್ತು ಮೇಘನಾ ಕುಟುಂಬದಲ್ಲಿ ಮತ್ತೆ ಸಂತೋಷ ಮನೆಮಾಡಲಿದೆ.