Saturday, July 2, 2022

Latest Posts

ಅ.24ಕ್ಕೆ ಅದಿತಿ ಪ್ರ ಭುದೇವ ಹೊಸ ಚಿತ್ರದ ಟೈಟಲ್ ಲಾಂಚ್

ಸ್ಯಾಂಡಲ್‌ವುಡ್  ಚಿತ್ರರಂಗ  ಬದಲಾವಣೆಯ  ಪರ್ವದತ್ತ  ಸಾಗುತ್ತಿದೆ.  ದಿನದಿಂದ  ದಿನಕ್ಕೆ  ಹೊಸಬರ  ಹಾವಳಿ  ಹೆಚ್ಚಾಗುತ್ತಲೇ  ಇದೆ.  ಅಷ್ಟೇ  ಅಲ್ಲದೇ  ಅವರ  ಹೊಸ  ಪ್ರಯತ್ನಕ್ಕೆ   ಮೆಚ್ಚುಗೆ  ಸಹ  ವ್ಯಕ್ತವಾಗುತ್ತದೆ.

ಅದೇ ರೀತಿ ನಿರ್ದೇಶಕ ಮನೋಜ್ ಪಿ. ನಡಲುಮನೆ ಚೊಚ್ಚಲ ಚಿತ್ರವನ್ನು  ಮಾಡುತ್ತಿದ್ದಾರೆ.  ಈ  ಚಿತ್ರಕ್ಕೆ  ನಟಿ  ಅದಿತಿ ಪ್ರ ಭುದೇವ  ನಾಯಕಿಯಾಗಿ  ಕಾಣಿಸಿಕೊಂಡಿದ್ದಾರೆ.  ಈಗಾಗಲೇ  ಅವರ  ಲುಕ್  ಕೂಡ  ರಿಲೀಸ್  ಮಾಡಿದ್ದಾರೆ.  ಇನ್ನು  ಚಿತ್ರದ  ಟೈಟಲ್‌ನ್ನು  ಇದೇ   ತಿಂಗಳು  ೨೪ಕ್ಕೆ  ರಿಲೀಸ್ ಮಾಡಲಿದ್ದಾರೆ ಚಿತ್ರತಂಡ. ಈ ಹಿಂದೆ ಯುಗ ಯುಗಗಳೇ ಸಾಗಲಿ’ ಚಿತ್ರ ನಿರ್ಮಾಣ ಮಾಡಿದ್ದ ನಿರ್ಮಾಪಕರಾದ ಶ್ರೀಮತಿ ಪೂಜಾ ವಸಂತ್ ಕುಮಾರ್ ಈ  ಚಿತ್ರಕ್ಕೂ  ಬಂಡವಾಳ ಹೂಡಿದ್ದಾರೆ. ಲಾಕ್‌ಡೌನ್  ಸೃಷ್ಟಿಯಾದ ಕಥೆಯನ್ನು  ಕೇವಲ  ೩೦ ದಿನಗಳಲ್ಲಿ  ಬೆಂಗಳೂರು  ಸುತ್ತಮುತ್ತ ಚಿತ್ರೀಕರಿಸಲಾಗಿದೆ.  ಸಂಕಷ್ಟಕರ ಗಣಪತಿ’ ಸಿನಿಮಾ ಖ್ಯಾತಿಯ ಸಂಕಲನಕಾರ ವಿಜೇತ್ ಚಂದ್ರ, ಛಾಯಾಗ್ರಾಹಕ ಉದಯ್ ಲೀಲಾ ಹಾಗೂ  ಸಂಗೀತ ನಿರ್ದೇಶಕ ರಿತ್ವಿಕ್ ಮುರಳೀ‘ರ್ ಚಿತ್ರಕ್ಕೂ   ಸಂಗೀತ  ಸಂಯೋಜಿಸುತ್ತಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss