ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, August 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅ.24ರಂದು ರಾತ್ರಿ ಕೊಲ್ಲೂರು ದೇವಳದಲ್ಲಿ ರಥೋತ್ಸವ: ಈ ಬಾರಿ ಅರ್ಚಕರು, ಪುರೋಹಿತರು, ಸಿಬ್ಬಂದಿಗೆ ಮಾತ್ರ ಅವಕಾಶ

ಉಡುಪಿ: ಶರನ್ನವರಾತ್ರಿಯ ಪರ್ವ ಕಾಲದಲ್ಲಿ ಮಹಾನವಮಿಯಾದ ಅ.24ರಂದು ರಾತ್ರಿ 10.30ಕ್ಕೆ ಕೊಲ್ಲೂರು ಶ್ರೀಮೂಕಾಂಬಿಕಾ ದೇವಳದಲ್ಲಿ ರಥೋತ್ಸವ ಜರಗಲಿದೆ. ರಥೋತ್ಸವಕ್ಕೆ ದೇವಸ್ಥಾನದ ಆವರಣದೊಳಗೆ ದೇವಸ್ಥಾನದ ಅರ್ಚಕರು, ಪುರೋಹಿತರು, ಸಿಬ್ಬಂದಿಗೆ ಮಾತ್ರ ಅವಕಾಶವಿದೆ.
ಆದ್ದರಿಂದ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಸರಕಾರದ ಮಾರ್ಗಸೂಚಿಗಳನ್ನು ದೇವಾಲಯದಲ್ಲಿ ಅನುಷ್ಠಾನಗೊಳಿಸುವ ಸಲುವಾಗಿ ಅಂದು ಸಂಜೆ 5ಗಂಟೆಯಿಂದ ಸಾರ್ವಜನಿಕರಿಗೆ ದೇವರ ದರ್ಶನವನ್ನು ನಿರ್ಬಂಧಿಸಲಾಗಿದೆ. ಮರುದಿನ ಮುಂಜಾನೆ 4ಗಂಟೆಯಿಂದ ದೇವರ ದರ್ಶನ ಪಡೆಯಬಹುದು.
ದೇವಳದಲ್ಲಿ ಅ.25ರಂದು ವಿದ್ಯಾರಂಭ
ವಿಜಯ ದಶಮಿಯಂದು ಅಕ್ಷರಾಭ್ಯಾಸ ಮಾಡುವುದು ರೂಢಿಯಾಗಿರುವುದರಿಂದ ಮೂಕಾಂಬಿಕೆ ಸನ್ನಿಧಿಯಲ್ಲೂ ವಿದ್ಯಾರಂಭಕ್ಕೆ ಅವಕಾಶ ನೀಡಲಾಗಿದೆ. ಅ.25ರ ಮುಂಜಾನೆ 4 ಗಂಟೆಯಿಂದ ವಿದ್ಯಾರಂಭ ಪ್ರಾರಂಭವಾಗಲಿದೆ. ಮಗುವಿನ ಅಕ್ಷರಾಭ್ಯಾಸ ಮಾಡಲು ತಾಯಿ ಮತ್ತು ಮಗುವಿಗೆ ಮಾತ್ರ ಅವಕಾಶವಿದೆ. ಮಗುವಿನ ತಂದೆಯೂ ಆಗಮಿಸಬಹುದಾದರೂ ದೇವಳದಲ್ಲಿ ಸೇವಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಅವರಿಗೆ ಅವಕಾಶ ನೀಡಲಾಗುತ್ತದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss