Sunday, August 14, 2022

Latest Posts

ಅ. 3 ರಂದು ಪ್ರಧಾನಿ ಮೋದಿಯವರಿಂದ ವಿಶ್ವದ ಅತಿ ಉದ್ದದ ಸುರಂಗ ಮಾರ್ಗ ಉದ್ಘಾಟನೆ

ಶಿಮ್ಲಾ : ವಿಶ್ವದ ಅತಿ ಉದ್ದವಾದ ಸುರಂಗ ಮಾರ್ಗವಾದ ಹಿಮಾಚಲ ಪ್ರದೇಶದ ಅಟಲ್ ಸುರಂಗ ಮಾರ್ಗವನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ಬರೋಬ್ಬರಿ 10 ಸಾವಿರ ಅಡಿಗಿಂತ ಹೆಚ್ಚು ಉದ್ದವಾಗಿರುವ ವಿಶ್ವದ ಅತಿ ಉದ್ದವಾದ ಹೆದ್ದಾರಿ ಎಂಬ ಹೆಗ್ಗಳಿಕೆಗೆ ಅಟಲ್ ಸುರಂಗ ಮಾರ್ಗ ಪಾತ್ರವಾಗಿದೆ.ಈ ಸುರಂಗವು ಮನಾಲಿ ಮತ್ತು ಲೇಹ್ ನಡುವಿನ ಅಂತರವನ್ನು 46 ಕಿಮೀ ಕಡಿಮೆ ಮಾಡಲಿದೆ. ಹಾಗೂ ನಾಲ್ಕು ಗಂಟೆಗಳ ಪ್ರಯಾಣದ ಅವಧಿ ಸಹ ಉಳಿತಾಯವಾಗಲಿದೆ

ನಾಳೆ ಪ್ರಧಾನಿ ಮೋದಿ ಅವರು ಮನಾಲಿಗೆ ಭೇಟಿ ನೀಡುತ್ತಿದ್ದು, ಬಳಿಕ ಲಾಹೌಲ್ ಗೆ ಭೇಟಿ ನೀಡಲಿದ್ದಾರೆ ಎಂದು ಕೆಲವು ಮಾಧ್ಯಮಗಳ ವರದಿಗಳು ತಿಳಿಸಿವೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss