ಮಾಡ್ರಿಡ್: ಯುನೈಟೆಡ್ ಸ್ಟೇಟ್ಸ್ನಲ್ಲಿ ವಂಚನೆ ಆರೋಪ ಹೊರಿಸಲಾಗಿರುವ ಆಂಟಿ-ವೈರಸ್ ಸಾಫ್ಟ್ವೇರ್ ಸಂಸ್ಥಾಪಕ ಜಾನ್ ಮ್ಯಾಕ್ಅಫೀ ನನ್ನು ಇಂದು ಬಂಧಿಸಲಾಗಿದೆ.
ಮಂಗಳವಾರ ಬಾರ್ಸಿಲೋನಾ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಬ್ರಿಟಿಷ್ ಪಾಸ್ಪೋರ್ಟ್ನೊಂದಿಗೆ ಇಸ್ತಾಂಬುಲ್ಗೆ ವಿಮಾನ ಹತ್ತಲು ಹೊರಟಿದ್ದವನನ್ನು ಶನಿವಾರ ವಶಕ್ಕೆ ಪಡೆಯಲಾಗಿದೆ ಎಂದು ಸ್ಪ್ಯಾನಿಷ್ ಪೊಲೀಸ್ ಮೂಲಗಳು ತಿಳಿಸಿವೆ.
ನಂತರ ಮ್ಯಾಕ್ಅಫಿಯನ್ನು ಹೈಕೋರ್ಟ್ ನ್ಯಾಯಾಧೀಶರೊಬ್ಬರಿಗೆ ವಿಡಿಯೋ ಕರೆ ಮೂಲಕ ಹಾಜರುಪಡಿಸಲಾಗಿದ್ದು, ಅವರು ಜಾಮೀನು ನೀಡದಿರುವ ಹಿನ್ನಲೆ ಸದ್ಯ ಜೈಲಿನಲ್ಲಿದ್ದಾನೆ.