Thursday, August 11, 2022

Latest Posts

ಆಂತರಿಕ ಚುನಾವಣೆ ನಡೆಸದೆ ಹೋದರೆ ಕಾಂಗ್ರೆಸ್ ಇನ್ನೂ 50 ವರ್ಷ ವಿಪಕ್ಷದಲ್ಲಿ: ಗುಲಾಂ ನಬಿ ಆಜಾದ್ 

ಹೊಸದಿಲ್ಲಿ :ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸದೆ ಹೋದರೆ ಇನ್ನೂ ೫೦ವರ್ಷಗಳ ಕಾಲ ಕಾಂಗ್ರೆಸ್ ಕಾಯಂ ಆಗಿ ವಿಪಕ್ಷದಲ್ಲಿ ಕೂರಬೇಕಾದೀತು ಎಂಬುದಾಗಿ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹೇಳುವ ಮೂಲಕ ಮತ್ತೆ ಹೊಸ ಬಾಂಬ್ ಹಾಕಿದ್ದಾರೆ. ದೇಶದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ ಎಂದೆಲ್ಲ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ, ಅವರ ಪುತ್ರ ರಾಹುಲ್ ಗಾಂಧಿ ಬೊಬ್ಬಿಡುತ್ತಿರುವಾಗಲೇ ಕಾಂಗ್ರೆಸ್‌ನ ಈ ಹಿರಿಯ ನಾಯಕನ ಹೇಳಿಕೆ ಪಕ್ಷದ ಹೈಕಮಾಂಡಿಗೆ ಭಾರೀ ಪೇಚನ್ನುಂಟು ಮಾಡಿದೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸದೆ ನೇಮಕಗೊಳ್ಳುವ ಅಧ್ಯಕ್ಷನಿಗೆ ಪಕ್ಷದಲ್ಲಿ ನಿಜವಾಗಿ ಶೇ.೧ರಷ್ಟೂ ಬೆಂಬಲ ಇರದು. ಆದರೆ ಪಕ್ಷದ ಸಾಂಸ್ಥಿಕ ಹುದ್ದೆಗಳಿಗೆ ಚುನಾವಣೆಗಳನ್ನು ಯಾರು ವಿರೋಧಿಸುತ್ತಾರೋ ಅವರೆಲ್ಲ ಹುದ್ದೆಗಳನ್ನು ಕಳೆದುಕೊಳ್ಳುವ ಭಯದಿಂದ ಚುನಾವಣೆಯನ್ನು ವಿರೋಧಿಸುತ್ತಿದ್ದಾರೆಯೇ ವಿನಾ ಬೇರೇನಲ್ಲ ಎಂಬುದಾಗಿಯೂ ಆಜಾದ್ ಕುಟುಕಿದ್ದಾರೆ.ಪಕ್ಷಕ್ಕೆ ಒಬ್ಬ ಪೂರ್ಣಾವ ಅಧ್ಯಕ್ಷರು ಬೇಕಾಗಿದ್ದಾರೆ ಮತ್ತು ಅಧ್ಯಕ್ಷ ಸ್ಥಾನಕ್ಕೆ ಪಾರದರ್ಶಕ ರೀತಿಯಲ್ಲಿ ಚುನಾವಣೆ ನಡೆಯಬೇಕು ಎಂದು ಆಗ್ರಹಿಸಿ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದ ೨೩ಹಿರಿಯ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾಗಿರುವ ಆಜಾದ್ ಮತ್ತೆ ತಮ್ಮ ಧ್ವನಿ ಎತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯಂತಹವರು ಗಾಂಧಿ ಕುಟುಂಬದವರೇ ಅಂದರೆ ಸೋನಿಯಾ ಅಥವಾ ಅವರ ಪುತ್ರ ರಾಹುಲ್ ಪಕ್ಷಾಧ್ಯಕ್ಷರಾಗಲಿ ಎಂದು ಪ್ರತಿಪಾದಿಸುತ್ತಿರುವಾಗಲೇ ಗುಲಾಂ ನಬಿ ಆಜಾದ್ ಅವರ ಈ ಹೇಳಿಕೆ ಹೊರಬಿದ್ದಿರುವುದು ಕಾಂಗ್ರೆಸ್‌ನ ಹಿರಿಯ ನಾಯಕವರ್ಗದಲ್ಲೇ ಸ್ಪಷ್ಟ ವಿಭಜನೆಯಾಗಿರುವುದನ್ನು ವ್ಯಕ್ತಗೊಳಿಸಿದಂತಾಗಿದೆ.
“ನೀವು ಚುನಾವಣೆಗೆ ನಿಂತಾಗ ಕನಿಷ್ಠ ಶೇ.೫೧ರಷ್ಟು ಮಂದಿ ನಿಮ್ಮ ಜೊತೆಗಿರುತ್ತಾರೆ.ಇತರರು ಶೇ.೧೦-೧೫ರಷ್ಟು ಮತಗಳನ್ನು ಪಡೆಯಬಹುದು.ಗೆದ್ದ ವ್ಯಕ್ತಿ ಪಕ್ಷಾಧ್ಯಕ್ಷರಾಗುತ್ತಾರೆ. ಇದರ ಅರ್ಥವೆಂದರೆ ಅಂತಹವರ ಜೊತೆ ಶೇ.೫೧ಮಂದಿ ಇರುತ್ತಾರೆ.ಆದರೆ ಈಗ ಅಧ್ಯಕ್ಷರಾಗಿ ನೇಮಕಗೊಳ್ಳುವ ಒಬ್ಬ ವ್ಯಕ್ತಿಗೆ ಶೇ.೧ರಷ್ಟೂ ಬೆಂಬಲ ಇರುವುದಿಲ್ಲ.ಒಂದು ವೇಳೆ ಸಿಡಬ್ಲ್ಯೂಸಿ ಸದಸ್ಯರು ಚುನಾಯಿತರಾದರೆ ಅವರನ್ನು ವಜಾಗೊಳಿಸಲು ಸಾಧ್ಯವಿಲ್ಲ.ಹೀಗಿರುವಾಗ ಏನು ಸಮಸ್ಯೆ?”ಇದು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಜಾದ್ ಮುಂದಿಟ್ಟ ಪ್ರಶ್ನೆ.
“ಇನ್ನು ಎರಡನೇ , ಮೂರನೇ, ನಾಲ್ಕನೇ ಸ್ಥಾನ ಪಡೆದವರು ನಾವು ಪಕ್ಷವನ್ನು ಬಲಪಡಿಸಬೇಕೆಂದು ಯೋಚಿಸುತ್ತಾರೆ.ಮುಂದಿನ ಬಾರಿಯಾದರೂ ಗೆಲ್ಲಲೇಬೇಕೆಂದು ಕಠಿಣ ಪರಿಶ್ರಮ ಪಟ್ಟು ಪಕ್ಷವನ್ನು ಬಲಗೊಳಿಸುತ್ತಾರೆ.ಆದರೆ ಈಗ ನೇಮಕಗೊಳ್ಳುವ ಅಧ್ಯಕ್ಷ ಪಕ್ಷ ಕಾರ್ಯಕರ್ತರ ಪೈಕಿ ಶೇ.೧ರಷ್ಟೂ ಬೆಂಬಲ ಹೊಂದಿರುವುದಿಲ್ಲ “ಎಂದು ಆಜಾದ್ ನುಡಿದರು. ಚುನಾವಣೆಗಳು ಪಕ್ಷವನ್ನು ಬಲಗೊಳಿಸಲು ತಳಪಾಯವಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.
ಕೆಲವೇ ದಿನಗಳ ಹಿಂದೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ-ಕಾಂಗ್ರೆಸ್‌ನ ಅತ್ಯುಚ್ಚ ನೀತಿ ನಿರೂಪಣಾ ಮಂಡಳಿ)ಸಭೆಯಲ್ಲಿ , ಎಐಸಿಸಿ ಅವೇಶನ ಕರೆಯಲು ಅವಕಾಶ ನೀಡುವಂತಹ ಸಂದರ್ಭ ಬರುವವರೆಗೂ ಇಂಡಿಯನ್ ನ್ಯಾಷನಲ್ ಕಾಂಗ್ರೆಸನ್ನು ನೀವೇ ಮುನ್ನಡೆಸಬೇಕೆಂದು ಸೋನಿಯಾ ಗಾಂಧಿಯವರನ್ನೇ ಕೋರುವ ನಿರ್ಣಯ ಅಂಗೀಕರಿಸಲಾಗಿತ್ತು. ಇದಕ್ಕೂ ಮುನ್ನ ಚುನಾವಣೆಗೆ ಒತ್ತಾಯಿಸಿ ಪತ್ರ ಬರೆದ ನಾಯಕರು ಬಿಜೆಪಿ ಜೊತೆ ನಂಟು ಹೊಂದಿದ್ದಾರೆ ಎಂಬುದಾಗಿ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದರೆ, ಸೋನಿಯಾ ಗಾಂ ಇಂತಹ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.ಸಭೆಯಲ್ಲಿ ಆಜಾದ್ , ಕಪಿಲ್ ಸಿಬಲ್‌ರಂತಹ ನಾಯಕರನ್ನು ಮೌನವಾಗಿಸಲು ಹೈಕಮಾಂಡ್ ಯಶಸ್ವಿಯಾದರೂ ಇದೀಗ ಮತ್ತೆ ಆಜಾದ್ ಧ್ವನಿ ಎತ್ತಿರುವುದು ಕಾಂಗ್ರೆಸ್ ಪಾಳಯದಲ್ಲಿ ತಲ್ಲಣವುಂಟು ಮಾಡಿದೆ.
ಈಗ ಏಕೆ ಚುನಾವಣೆ ಪ್ರತಿಪಾದನೆ?
ಕಾಂಗ್ರೆಸ್‌ನಲ್ಲಿ ಇಷ್ಟು ವರ್ಷ ಕಾಲ ಚುನಾವಣೆ ಬದಲು ನೇಮಕಾತಿಗಳೇ ನಡೆಯುತ್ತಿದ್ದರೂ ಮೌನವಾಗಿದ್ದ ಆಜಾದ್ ಈಗ ಏಕೆ ಚುನಾವಣೆ ಬಗ್ಗೆ ಮಾತನಾಡುತ್ತಾರೆ ?ಎಂಬುದೀಗ ಕುತೂಹಲ ಮೂಡಿಸಿರುವ ಪ್ರಶ್ನೆ.ಇದಕ್ಕೆ ಆಜಾದ್ ಕಳೆದ ಕೆಲವು ದಶಕಗಳಿಂದ ಪಕ್ಷದಲ್ಲಿ ಚುನಾವಣೆಗಳು ನಡೆದಿಲ್ಲ.ನಾವು ಪಕ್ಷದಲ್ಲಿ ಚುನಾಯಿತ ಮಂಡಳಿಗಳನ್ನು ಹೊಂದಿರಲಿಲ್ಲ.ಇದನ್ನು ಬದಲಿಸಿ ನಾವು ೧೦-೧೫ವರ್ಷಗಳ ಹಿಂದೆಯೇ ಚುನಾವಣೆಗಳನ್ನು ನಡೆಸಬೇಕಾಗಿತ್ತು.ಈಗ ನಾವು ಚುನಾವಣೆಗಳಲ್ಲಿ ಒಂದಾದ ಮೇಲೊಂದರಂತೆ ಸೋಲುತ್ತಲೇ ಇದ್ದೇವೆ.ಈಗಲಾದರೂ ನಾವು ಮತ್ತೆ ಅಕಾರಕ್ಕೆ ಬರಬೇಕಾಗಿದ್ದರೆ ಚುನಾವಣೆಗಳನ್ನು ನಡೆಸಿ ಪಕ್ಷವನ್ನು ಬಲಗೊಳಿಸಬೇಕಾಗಿದೆ ಎಂದರು. ಒಂದು ವೇಳೆ ಚುನಾವಣೆಗಳನ್ನು ನಡೆಸದೆ ಹೋದರೆ ಮುಂದಿನ ೫೦ವರ್ಷಗಳಲ್ಲೂ ಕಾಂಗ್ರೆಸ್‌ಗೆ ವಿಪಕ್ಷ ಪಟ್ಟ ಕಾಯಂ ಎಂದು ಅವರು ಹೇಳಿದರು.
ವಿರೋಧಿಸುವವರಿಗೆ ತರಾಟೆ
ಹೌದು, ಚುನಾವಣೆಗಳನ್ನು ನಡೆಸಬೇಕೆಂಬ ತಮ್ಮ ಕರೆಗೆ ಹಲವರಿಂದ ತೀವ್ರ ವಿರೋಧ ಬರುತ್ತಿದೆ. ಆದರೆ ಈ ರೀತಿ ವಿರೋಸುವವರು ‘ನೇಮಕಾತಿ ಪತ್ರ’ಗಳನ್ನು ಹೊಂದಿದವರೇ ಆಗಿದ್ದಾರೆ. ಕೆಲವು ಪ್ರಭಾವಿ ನಾಯಕರು ತಮ್ಮ ಪ್ರಭಾವ ಬಳಸಿ ರಾಜ್ಯಾಧ್ಯಕ್ಷರ ನೇಮಕಕ್ಕೆ ಕಾರಣವಾಗಿದ್ದಾರೆ. ಅಂತಹ ನಾಯಕರು, ರಾಜ್ಯ ಅಧ್ಯಕ್ಷರು, ಜಿಲ್ಲಾಧ್ಯಕ್ಷರು ತಮ್ಮ ಪ್ರಸ್ತಾವವನ್ನು ವಿರೋಸುತ್ತಿದ್ದಾರೆ. ಅವರೆಲ್ಲ ನಿಜವಾಗಿಯೂ ಕಾಂಗ್ರೆಸ್ ಬಲಗೊಳ್ಳಬೇಕೆಂದು ಬಯಸುವವರೇ ಆಗಿದ್ದರೆ, ಈ ಪತ್ರವನ್ನು ಬೆಂಬಲಿಸಬೇಕು.ಹಾಗೆಯೇ ಪಕ್ಷದ ರಾಜ್ಯಾಧ್ಯರು, ಜಿಲ್ಲಾಧ್ಯಕ್ಷರೆಲ್ಲ ಪಕ್ಷದ ಕಾರ್ಯಕರ್ತರಿಂದಲೇ ಚುನಾಯಿತರಾಗಿ ಬರಬೇಕು.ಇಡಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಚುನಾವಣೆ ಮೂಲಕವೇ ರಚನೆಯಾಗಬೇಕು ಎಂದು ಆಜಾದ್ ನುಡಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss