Wednesday, July 6, 2022

Latest Posts

ಆಂಧ್ರದಲ್ಲಿ ಮತ್ತೊಂದು ನಿಗೂಢ ಕಾಯಿಲೆ ಪತ್ತೆ: 29 ಮಂದಿ ಸ್ಥಿತಿ ಗಂಭೀರ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಆಂಧ್ರಪ್ರದೇಶದ ಎಲೂರಿನಲ್ಲಿ ಕಳೆದ ಡಿಸೆಂಬರ್​ನಲ್ಲಿ ಕಂಡ ನಿಗೂಢ ಕಾಯಿಲೆಯಿಂದ ಜನ ಕಂಗಾಲಾಗಿ ಹೋಗಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೆ ಕೆಲವು ಮಂದಿಯಲ್ಲಿ ದಿಢೀರನೆ ವಾಂತಿ, ತಲೆಸುತ್ತು, ತಲೆನೋವು ಮತ್ತು ಬೆನ್ನು ನೋವಿನಂತಹ ಸಮಸ್ಯೆಗಳು ಕಾಣಿಸಿವೆ.
ಪುಲ್ಲಾ ಗ್ರಾಮದಲ್ಲಿ ಹಲವಾರು ಮಂದಿ ಈ ನಿಗೂಢ ಕಾಯಿಲೆಯಿಂದ ಬಳಲುತ್ತಿದ್ದು, 29 ಮಂದಿ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಬಾಧಿತ ರೋಗಿಗಳು ಮೂರ್ಛೆ ರೋಗ, ಹೆಪ್ಪುಗಟ್ಟುವಿಕೆ, ವಾಂತಿ ಸೇರಿದಂತೆ ಇತರೆ ಲಕ್ಷಣಗಳನ್ನು ತೋರಿಸಿದ್ದು ಇದು ಎಲುರು ಪ್ರಕರಣಗಳಿಗೆ ಹೋಲತ್ತದೆ ಎನ್ನಲಾಗಿದೆ.
ಇನ್ನು ಪುಲ್ಲಾದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಬೇಕು ಎಂದು ಪ್ರತಿಪಕ್ಷದ ನಾಯಕ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಆಂಧ್ರ ಸರಕಾರವನ್ನು ಒತ್ತಾಯಿಸಿದರು.
ಈ ಹಿಂದೆ ಆಂಧ್ರಪ್ರದೇಶದ ಎಲೂರಿನಲ್ಲಿ 500ಕ್ಕೂ ಹೆಚ್ಚು ಜನರನ್ನು ನಿಗೂಢ ಕಾಯಿಲೆ ಅಸ್ವಸ್ಥಗೊಳಿಸಿತ್ತು. ಇದಕ್ಕೆ ನೀರಿನಲ್ಲಿ ಬೆರೆತಿರುವ ಅತ್ಯಧಿಕ ಪ್ರಮಾಣದ ಸೀಸ (ಲೆಡ್‌) ಮತ್ತು ನಿಕಲ್‌ ಲೋಹಗಳ ಧಾತುಗಳೇ ಇದಕ್ಕೆ ಕಾರಣ ಎಂದು ಕೇಂದ್ರ ತಜ್ಞರ ತಂಡ ಪತ್ತೆ ಹಚ್ಚಿದ್ದರೂ ಇದರ ಬಗ್ಗೆ ಇನ್ನೂ ಸಂದೇಹವೇ ಉಳಿದುಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss