ಹೊಸದಿಗಂತ ಆನ್ ಲೈನ್ ಡೆಸ್ಕ್:
ಆಂಧ್ರಪ್ರದೇಶದ ಅರಕು ಘಾಟ್ ರಸ್ತೆ ಕಣಿವೆಯಲ್ಲಿ ಬಸ್ ಪ್ರಪಾತಕ್ಕೆ ಬಿದ್ದು 8 ಮಂದಿ ಸಾವನ್ನಪ್ಪಿದ್ದಾರೆ.
ಶುಕ್ರವಾರ ಸಂಜೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಅರಕು ಘಾಟ್ ರಸ್ತೆಯ ಕಣಿವೆಯಲ್ಲಿ ಘಟನೆ ನಡೆದಿದ್ದು, 30 ಪ್ರಯಾಣಿಕರಿದ್ದ ಬಸ್ ಪ್ರಪಾತಕ್ಕೆ ಬಿದ್ದು, ಕನಿಷ್ಠ 8 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಅರಕು ಕಣಿವೆಗೆ ಹೋಗುವ ಮಾರ್ಗದಲ್ಲಿ ಅನಂತಗಿರಿ ಗ್ರಾಮದ ಡುಮುಕು ಸಮೀಪ ಕಡಿದಾದ ತಿರುವು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದಿದೆ.
ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಆಂಬುಲೆನ್ಸ್ ಸಹಿತ ಧಾವಿಸಿದ್ದು, ರಾತ್ರಿಯ ಕತ್ತಲಲ್ಲೂ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.