ವಿಜಯವಾಡ: ಆಂಧ್ರಪ್ರದೇಶದ ರಾಜಭವನದಲ್ಲಿ ನಾಲ್ವರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ರಾಜ್ಯಪಾಲರಾದ ವಿಶ್ವಭೂಷಣ್ ಅವರ ಭದ್ರತಾಧಿಕಾರಿ,ನರ್ಸ್ ಹಾಗೂ ಇಬ್ಬರು ಅಟೆಂಡರುಗಳಿನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿದೆ ಎಂದು ರಾಜ್ಯದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಜವಹರರೆಡ್ಡಿ ತಿಳಿಸಿದ್ದಾರೆ. ಉಳಿದಂತೆ ರಾಜಭವನದಲ್ಲಿ ರಾಜ್ಯಪಾಲರೂ ಸೇರಿದಂತೆ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಅವರೆಲ್ಲರಿಗೂ ನೆಗೆಟೀವ್ ಬಂದಿದೆ ಎಂದು ಡಾ. ರೆಡ್ಡಿ ಸ್ಪಷ್ಟಪಡಿಸಿದ್ದಾರೆ.