Saturday, August 13, 2022

Latest Posts

ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ವೃದ್ಧೆಯನ್ನು ರಕ್ಷಿಸಿದ ಉಡುಪಿ ನಗರ ಠಾಣಾ ಪಿಎಸ್ಐ

ಉಡುಪಿ: ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ವೃದ್ಧೆಯನ್ನು ಉಡುಪಿ ನಗರ ಠಾಣೆಯ ಪಿಎಸ್ಐ ತಕ್ಷಣ ಬಾವಿಗಿಳಿದು ರಕ್ಷಿಸಿರುವ ಘಟನೆ ನಗರದ ಹೊರ ವಲಯದ ಮಾರ್ಪಳ್ಳಿ ಎಂಬಲ್ಲಿ ಗುರುವಾರ ನಡೆದಿದೆ.
ಕುಕ್ಕಿಕಟ್ಟೆಯ ವೃದ್ಧೆಯೊರ್ವರು ಮನೆಯ ಬಾವಿಗೆ ಆಕಸ್ಮಿಕವಾಗಿ ಬಿದ್ದು, ಜೀವನ್ಮರಣದ ಸ್ಥಿತಿಯಲ್ಲಿದ್ದರು. ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ಗಸ್ತಿನಲ್ಲಿದ್ದ ಉಡುಪಿ ನಗರ ಠಾಣೆಯ ಪಿಎಸ್ಐ ಸದಾಶಿವ ರಾ. ಗವರೋಜಿ ಅವರಿಗೆ ಈ ಸಂದೇಶ ಸಿಕ್ಕಿದೆ. ಅವರು ಕೂಡಲೇ ಸ್ಥಳಕ್ಕಾಗಮಿಸಿದ್ದಾರೆ.
ಸ್ಥಳಕ್ಕೆ ಬಂದಾಗ ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಗಿಳಿಯಲು ಸಿದ್ಧತೆ ಮಾಡುತ್ತಿದ್ದರು. ಆದರೆ ತಡ ಮಾಡದೇ ಪಿಎಸ್ಐ ಸದಾಶಿವ, ವಿನಾಯಕ ಹಾಗೂ ಸ್ಥಳೀಯ ಆಟೋ ಚಾಲಕ ರಾಜೇಶ್ ನಾಯಕ್ ಕೂಡಲೇ ಬಾವಿಗಿಳಿದರು. ವೃದ್ಧೆಗೆ ಹಗ್ಗ ಕಟ್ಟಿ ಮೇಲೆತ್ತಲಾಯಿತು. ಬಾವಿಗೆ ಬಿದ್ದಿದ್ದ ಅಜ್ಜಿ ಆರೋಗ್ಯವಾಗಿದ್ದಾರೆ.
ರಕ್ಷಣಾ ಕಾರ್ಯದ ಬಗ್ಗೆ ‘ಹೊಸದಿಗಂತ’ ಜೊತೆ ಮಾತನಾಡಿದ ಸದಾಶಿವ ಗವರೋಜಿ, ಪೊಲೀಸ್ ಕೆಲಸಕ್ಕೆ ಸೇರಿದ ಮೇಲೆ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆ ಸಾರ್ವಜನಿಕ ರಕ್ಷಣೆ ಕೂಡ ನಮ್ಮ ಹೊಣೆ. ಅಸಾಹಯಕ ಸ್ಥಿತಿಯಲ್ಲಿ ಜೀವ ಉಳಿಸಲು ಬಾವಿಗಿಳಿದೆ. ಜೊತೆಗಿದ್ದ ಇಬ್ಬರ ಸಹಾಯದಿಂದ ರಕ್ಷಣೆ ಸಾಧ್ಯ ಆಗಿದೆ ಎಂದು ತಿಳಿಸಿದ್ದಾರೆ.
ತುರ್ತು ಜೀವರಕ್ಷಣೆ ಕಾರ್ಯಚರಣೆಯಲ್ಲಿ ಸಾಹಸ ಮೆರೆದಿರುವ ಜೀವರಕ್ಷಕರಿಗೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss