Sunday, June 26, 2022

Latest Posts

ಆಕಸ್ಮಿಕವಾಗಿ ಪಾಕ್ ಗೆ ತೆರಳಿದ್ದ ದನಗಾಹಿ 12 ವರ್ಷಗಳ ಬಳಿಕ ಮರಳಿ ಭಾರತಕ್ಕೆ!

ಹೊಸದಿಗಂತ ಆನ್ ಲೈನ್ ಡೆಸ್ಕ್:

2008ರಲ್ಲಿ ಆಕಸ್ಮಿಕವಾಗಿ ಭಾರತದ ಗಡಿ ದಾಟಿ ಪಾಕಿಸ್ತಾನಕ್ಕೆ ತೆರಳಿದ್ದ ಗುಜರಾತ್‌ನ ಕಛ್ ಜಿಲ್ಲೆಯ ದನಗಾಹಿಯೊಬ್ಬರು ಜೈಲುಶಿಕ್ಷೆ ಪೂರ್ಣಗೊಂಡ ಬಳಿಕ ಭಾರತಕ್ಕೆ ಮರಳಿದ್ದಾರೆ.
ಇಸ್ಮಾಯಿಲ್ ಸಾಮ ಎಂಬಾತ 2008ರಲ್ಲಿ ದನಗಳನ್ನು ಮೇಯಿಸುವಾಗ ಆಕಸ್ಮಿಕವಾಗಿ ಪಾಕಿಸ್ತಾನ ತಲುಪಿದ್ದರು. ಅಲ್ಲಿನ ಸೇನೆ ಇಸ್ಮಾಯಿಲ್ ಅವರನ್ನು ಭಾರತದ ಗೂಢಚಾರನೆಂದು ಭಾವಿಸಿ ಬಂಧಿಸಿ ಜೈಲಿನಲ್ಲಿರಿಸಿತ್ತು.
ಬಳಿಕ ಈ ಕುರಿತು ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ ಮನವಿ ಸಲ್ಲಿಸಿತ್ತು. ಈ ಪ್ರಕರಣವನ್ನು ಪರಿಶೀಲಿಸಿದ ಇಸ್ಲಾಮಾಬಾದ್ ಹೈಕೋರ್ಟ್ ಇಸ್ಮಾಯಿಲ್ ಅವರನ್ನು ಬಿಡುಗಡೆ ಮಾಡಲು ಆದೇಶಿಸಿತ್ತು. ಶುಕ್ರವಾರ ವಾಘಾ-ಅಟಾರಿ ಅಂತಾರಾಷ್ಟ್ರೀಯ ಗಡಿ ಮೂಲಕ ಇಸ್ಮಾಯಿಲ್ ಭಾರತದ ಅಮೃತಸರಕ್ಕೆ ತಲುಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆತ 2008ರಲ್ಲಿ ಇಸ್ಮಾಯಿಲ್ ಪಾಕಿಸ್ತಾನಕ್ಕೆ ತಲುಪಿರುವ ಕುರಿತು ಅವರ ಕುಟುಂಬಕ್ಕೆ ಮಾಹಿತಿ ಇರಲಿಲ್ಲ. ಆದರೆ, 2017ರಲ್ಲಿ ಪಾಕಿಸ್ತಾನದ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಪಕ್ಕದ ಗ್ರಾಮದ ವ್ಯಕ್ತಿಯೊಬ್ಬ ಇಸ್ಮಾಯಿಲ್ ಪಾಕಿಸ್ತಾನದ ಜೈಲಿನಲ್ಲಿರುವ ಕುರಿತು ಮಾಹಿತಿ ನೀಡಿದ್ದ. ಆಗ ಕುಟುಂಬಕ್ಕೆ ವಿಷಯ ತಿಳಿಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss