Sunday, June 26, 2022

Latest Posts

ಆಕಸ್ಮಿಕ ಅಗ್ನಿ ಅವಘಡ: ಕೊಟ್ಟಿಗೆ ಸಹಿತ 4 ರಾಸುಗಳು ಸುಟ್ಟು ಭಸ್ಮ

ಹೊಸ ದಿಗಂತ ವರದಿ , ಚಿಕ್ಕಮಗಳೂರು:

ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಕೊಟ್ಟಿಗೆ ಸಹಿತ 4 ರಾಸುಗಳು ಸುಟ್ಟು ಕರಕಲಾಗಿರುವ ಘಟನೆ ಅಜ್ಜಂಪುರ ತಾಲ್ಲೂಕಿನ ಮುಗಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಗ್ರಾಮದ ಕೊಣಬಿ ಮಂಜಪ್ಪ, ಮಹೇಶ್ವರಪ್ಪ ಎನ್ನುವ ಸಹೋದರರಿಗೆ ಸೇರಿದ ದನದ ಕೊಟ್ಟಿಗೆಯಲ್ಲಿ ರಾಸುಗಳನ್ನು ಕಟ್ಟಲಾಗಿತ್ತು. ಮಂಗಳವಾರ ರಾತ್ರಿ ಸುಮಾರು 9.30 ರ ವೇಳೆಗೆ ಆಕಸ್ಮಿಕವಾಗಿ ಕೊಟ್ಟಿಗೆಗೆ ಬೆಂಕಿ ತಗುಲಿ ಮಂಜಪ್ಪ ಎಂಬುವವರಿಗೆ ಸೇರಿದ 4 ರಾಸುಗಳು ಅಗ್ನಿಗೆ ಆಹುತಿಯಾಗಿವೆ.
ಗ್ರಾಮದ ಯುವಕರಾದ ಪ್ರದೀಪ, ರವಿ ಸಹಿತ ಊರಿನ ಗ್ರಾಮಸ್ಥರು ರಾಸುಗಳನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾದರಾದರೂ, ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿದ್ದರಿಂದ ಸಾಧ್ಯವಾಗಲಿಲ್ಲ.
ಘಟನೆ ತಿಳಿಯುತ್ತಿದ್ದಂತೆ ತರೀಕೆರೆ ಹಾಗೂ ಕಡೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದರು ಜೊತೆಗೆ ಅಜ್ಜಂಪುರ ಪೊಲೀಸ್ ಠಾಣೆಯ ಪಿಎಸ್‍ಐ ಬಸವರಾಜ್ ಘಟನೆ ಸಂಬಂಧ ಸ್ಥಳ ಪರಿಶೀಲಿಸಿ ಮಾಹಿತಿ ಪಡೆದರು.
ಕುಟುಂಬಕ್ಕೆ ಜೀವನಾಧಾರವಾಗಿದ್ದ 2 ಲಕ್ಷಕ್ಕೂ ಅಧಿಕ ಮೌಲ್ಯದ ರಾಸುಗಳನ್ನು ಕಳೆದುಕೊಂಡಿದ್ದು ಇದೀಗ ಜೀವನ ನಿರ್ವಹಣೆ ಕಷ್ಟವಾಗಿದ್ದು ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ರಾಸುಗಳ ಮಾಲೀಕ ಮಂಜಪ್ಪ ಒತ್ತಾಯಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss