Sunday, June 26, 2022

Latest Posts

ಆಕಸ್ಮಿಕ ಬೆಂಕಿ ಅವಘಡ: ಐದು ಗುಡಿಸಲುಗಳು ಸುಟ್ಟು ಭಸ್ಮ

ಹೊಸದಿಗಂತ ವರದಿ, ರಾಮನಗರ:

ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಐದು ಗುಡಿಸಲುಗಳು ಭಸ್ಮವಾಗಿರುವ ಘಟನೆ ಎಂ.ಕೆ.ದೊಡ್ಡಿ ಠಾಣೆ ವ್ಯಾಪ್ತಿಯ ಬೇವೂರು ಗ್ರಾಮದಲ್ಲಿ ನಡೆದಿದೆ.

ತಿಮ್ಮಮ್ಮ, ವೆಂಕಟ ಲಕ್ಷ್ಮಮ್ಮ, ವೆಂಕಟೇಶ್‌, ಸಾಕಮ್ಮ ಎಂಬವರಿಗೆ ಸೇರಿದ ಮನೆಗಳು ಬೆಂಕಿಗೆ ಆಹುತಿಯಾಗಿದ್ದು, ಗುಡಿಸಲಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಮಂದಿಯೆಲ್ಲಾ ಊಟ ಮಾಡಿ ಮಲ ಗುವ ಸಮಯದಲ್ಲಿ ಇದ್ದಕ್ಕಿದ್ದಂತೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿನಾಲ್ಕು ಗುಡಿಸಲುಗಳಿಗೂ ಆವರಿಸಿಕೊಂಡು, ನೋಡು ನೋಡುತ್ತದ್ದಂತೆ ದಹಿಸಿ ಹೋಗಿವೆ.

ಬೇಸಿಗೆಯ ಸಂದರ್ಭ ಹಾಗೂ ನಾಲ್ಕುಗುಡಿಸಲು ಹೊಂದಿಕೊಂಡಂತಿದ್ದುದರಿಂದಬೆಂಕಿ ಬೇಗನೆ ಗುಡಿಸಲುಗಳಿಗೆ ಆವರಿಸಿಕೊಂಡು ಉರಿಯಲಾರಂಭಿಸಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಗ್ರಾಮಾಂತರ ವೃತ್ತ ನಿರೀಕ್ಷಕ ಬಿ.ಶಿವಕುಮಾರ್‌ ಹಾಗೂ ಎಂ.ಕೆ. ದೊಡ್ಡಿ ಠಾಣೆಯ ಪಿಎಸ್‌ಐ ಸದಾನಂದ,ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಗುಡಿಸಲು ಕಳೆದುಕೊಂಡು ಬೀದಿಗೆ ಬಿದ್ದ ಕುಟುಂಬಕ್ಕೆ ಸೂರು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಆಶ್ರಯವಿಲ್ಲದೇ ನಿರಾಶ್ರಿತರಾಗಿರುವ ಕುಟುಂಬಗಳಿಗೆ ತಾಲೂಕು ಆಡಳಿತ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss