Wednesday, August 17, 2022

Latest Posts

ಆಗಸದಲ್ಲಿ ಎಫ್ -35 ಬಿ ಫೈಟರ್ ಜೆಟ್ ಗೆ ಟ್ಯಾಂಕರ್ ವಿಮಾನ ಡಿಕ್ಕಿ: ಪ್ಯಾರಾಚೂಟ್ ಮೂಲಕ ಧರೆಗಿಳಿದಿದ ಪೈಲೆಟ್ !

ಕ್ಯಾಲಿಫೋರ್ನಿಯಾ: ವೈಮಾನಿಕ ಇಂಧನ ತುಂಬುವ ಟ್ಯಾಂಕರ್ ವಿಮಾನಕ್ಕೆ ಅಮೆರಿಕ ವಾಯುಪಡೆಯ ಎಫ್ -35 ಬಿ ಫೈಟರ್ ಜೆಟ್‌ವೊಂದು ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಘಟನೆ ನಡೆದಿದೆ.
ಕ್ಯಾಲಿಫೋರ್ನಿಯಾದ ಇಂಪಿರಿಯಲ್ ಕೌಂಟಿ ಬಳಿ ದುರ್ಘಟನೆ ನಡೆದಿದ್ದು, ಟ್ಯಾಂಕರ್ ವಿಮಾನಕ್ಕೆ ಡಿಕ್ಕಿ ಹೊಡೆಯುತ್ತಿದ್ದಂತೇ ಪೈಲೆಟ್ ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಕೆಳಗಿಳಿದಿದ್ದಾನೆ.
ಈ ಕುರಿತು ಮಾಹಿತಿ ನೀಡಿದ ಯುಎಸ್ ಮರೀನ್ ಫೋರ್ಸ್, ಸಣ್ಣಪುಟ್ಟ ಗಾಯಗಳಿಂದ ಬಳಲುತ್ತಿರುವ ಪೈಲೆಟ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.
ಆಗಸದಲ್ಲೇ ಇಂಧನ ತುಂಬುವ ಕೆಸಿ -130 ಜೆ ವಿಮಾನ ಟ್ಯಾಂಕರ್ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ವಿಮಾನದ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!