Monday, August 8, 2022

Latest Posts

ಆಗಸ್ಟ್ ೧೫ಕ್ಕೆ ಬರಲಿದೆ ಡಿಯರ್ ಸತ್ಯ ಟೀಸರ್, ಹೀರೋ ಯಾರು? ಸಿನಿಮಾ ಯಾವಾಗ ರಿಲೀಸ್? ಮಾಹಿತಿ ಇಲ್ಲಿದೆ

ಕನ್ನಡ ಮೊದಲ ಬಾರಿಗೆ  ಓಟಿಟಿಯಲ್ಲಿ  ಆದರ್ಶ್  ಈಶ್ವರಪ್ಪ  ನಿರ್ದೇಶನದ  ಭಿನ್ನ  ಸಿನಿಮಾ  ರಿಲೀಸ್  ಆಗಿತ್ತು.  ಈ  ಚಿತ್ರ  ಯಶಸ್ವಿನ  ಹಾದಿ ಹಿಡಿಯಿತು. ತದನಂತರ   ಪರ್ಪಲ್  ರಾಕ್  ಎಂಟರ್ ಟೈನರ್ಸ್ ಮತ್ತು  ವಿಂಟರ್   ಬ್ರಿಡ್ಜ್

ಸ್ಟುಡಿಯೋಸ್ ಸಂಸ್ಥೆಯು ಡಿಯರ್ ಸತ್ಯ ಎನ್ನುವ ಮತ್ತೊಂದು ಥ್ರಿಲ್ಲರ್ ಸಿನಿಮಾವನ್ನು ನಿರ್ಮಿಸಿದೆ. ವಿಶೇಷವೆಂದರೆ, ಆಗಸ್ಟ್  ೧೫ರ ಸ್ವಾತಂತ್ರ್ಯ ದಿನಾಚರಣೆಯಂದು ಇದರ ಮೊದಲ ಟೀಸರ್ ರಿಲೀಸ್ ಮಾಡೋಕೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫ್’, ’ಹಳ್ಳಿ ಹೈದ ಪ್ಯಾಟೇಗ್ ಬಂದ’ ರಿಯಾಲಿಟಿ ಶೋಗಳಿಗೆ ನಿರೂಪಕರಾಗಿ, ’ಬಿಗ್ ಬಾಸ್ ಸೀಸನ್ ೨’ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಆರ್ಯನ್ ಸಂತೋಷ್, ’ನೂರು ಜನ್ಮಕು’ ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಂಡಿದ್ದರು. ಇದೀಗ ಅವರು ’ಡಿಯರ್ ಸತ್ಯ’ನಾಗಿ ರೀ-ಎಂಟ್ರಿ ನೀಡುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ಅರ್ಚನಾ ಕೊಟ್ಟಿಗೆ ನಟಿಸುತ್ತಿದ್ದಾರೆ. ನೈಜ ಘಟನೆಗಳಿಂದ ಪ್ರೇರಣೆಗೊಂಡಿರುವ ’ಡಿಯರ್ ಸತ್ಯ’ ಚಿತ್ರದಲ್ಲಿ ಅರುಣಾ ಬಾಲರಾಜ್, ಅಶ್ವಿನ್ ರಾವ್ ಪಲ್ಲಕ್ಕಿ, ಅರವಿಂದ್ ರಾವ್, ಅಪ್ಪಣ್ಣ, ಗುರುರಾಜ ಹೊಸಕೋಟೆ, ಆದರ್ಶ್ ಚಂದ್ರಕರ್ ಮುಂತಾದವರು ನಟಿಸಿದ್ದಾರೆ.

ಸದಾ ಗಿಜಿಗುಡುವ, ಗದ್ದಲದ ಬೆಂಗಳೂರಿನಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಒತ್ತಡಗಳು, ಜಂಜಾಟಗಳಿರುತ್ತವೆ. ಇವೆಲ್ಲದರ ನಡುವೆ ಸಾಮಾನ್ಯನೊಬ್ಬ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೆಣಗಾಡುವ, ತನ್ನ ಕನಸುಗಳನ್ನು ಈಡೇರಿಸಿಕೊಳ್ಳಲು ಯತ್ನಿಸುವ ಕಥಾ ಹಂದರ ’ಡಿಯರ್  ಸತ್ಯ’. ನಾಯಕನ ವಿರುದ್ಧ ಪಿತೂರಿ ನಡೆಸುವ ಸಂದರ್ಬೋಚಿತ  ಘಟನೆಗಳೊಂದಿಗೆತೀವ್ರ ತಿರುವು  ಪಡೆಯುವ  ಅಂಶಗಳನ್ನು   ಈ  ಚಿತ್ರದ  ಕಥೆ  ಒಳಗೊಂಡಿದೆ.

ಕನ್ನಡದಲ್ಲಿ ಸಕಾಷ್ಟು  ಉತ್ತಮ  ಚಿತ್ರ ನೀಡಿದ ಜಿಗರ್ ಥಂಡ’ ಖ್ಯಾತಿಯ ಶಿವಗಣೇಶ್ ’ಡಿಯರ್ ಸತ್ಯ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ’ಆ ದೃಶ್ಯ’, ’ತ್ರಾಟಕ’ ಸಿನಿಮಾಗಳ ಖ್ಯಾತಿಯ ವಿನೋದ್  ಭಾರತಿ ’ಡಿಯರ್ ಸತ್ಯ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಶ್ರೀ‘ರ್ ವಿ.

ಸಂಭ್ರಮ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ರಾಜ್ಯಪ್ರಶಸ್ತಿ ವಿಜೇತ ಸುರೇಶ್ ಆರ್ಮುಗಂ ಸಂಕಲನ, ’‘ಭಜರಂಗಿ’ ಮೋಹನ್, ಕಲೈ ಮತ್ತು ಗೀತಾ ನೃತ್ಯ ಸಂಯೋಜನೆ ಮಾಡಿದ್ದಾರೆ. ಸಾಹಸ ನಿರ್ದೇಶನವನ್ನು ಕುಂಗ್ಫು ಚಂದ್ರು ಮಾಡಿದ್ದಾರೆ.ಸದ್ಯ  ಚಿತ್ರದ  ಪೋಸ್ಟ್  ಪ್ರೋಡಕ್ಷನ್ ನಡೆಯುತ್ತಿದ್ದು,  ಇದೇ  ತಿಂಗಳು  ೧೫ರಂದು  ಟೀಸರ್  ಬಿಡುಗಡೆಗೊಳ್ಳಲಿದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss