Wednesday, June 29, 2022

Latest Posts

ಆಗಸ್ಟ್ 20ರಂದು ಸಿಇಟಿ ಫಲಿತಾಂಶ ಪ್ರಕಟ: ಡಾ.ಸಿಎಸ್.ಅಶ್ವತ್ಥ್ ನಾರಾಯಣ್

ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್ ಗಳಿಗಾಗಿ ಕೊರೋನಾ ಸೋಂಕಿನ ಭೀತಿಯ ನಡುವೆಯೂ ನಡೆದಿದ್ದಂತ ಸಿಇಟಿ-2020ರ ಫಲಿತಾಂಶ ಆಗಸ್ಟ್ 20ರಂದು ಪ್ರಕಟಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿಎಸ್.ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ  ಅವರು,ಇತ್ತೀಚೆಗೆ ನಡೆಸಲ್ಪಟ್ಟಿದ್ದಂತ ಸಿಇಟಿ-2020ರ ಪರೀಕ್ಷೆಯ ಫಲಿತಾಂಶ ಆಗಸ್ಟ್ 20ರಂದು ಪ್ರಕಟಗೊಳ್ಳಲಿದೆ. ಈ ಬಳಿಕ ಇಂಜಿನಿಯರಿಂಗ್ ಸೀಟ್ ನ ಶುಲ್ಕ ಹೆಚ್ಚಳ ಆಗುತ್ತಾ ಅಂತ ಅನೇಕ ಪೋಷಕರು, ವಿದ್ಯಾರ್ಥಿಗಳು ಕೇಳಿದ್ದಾರೆ. ಕೊರೋನಾ ಸಂದರ್ಭದಲ್ಲಿ ಇಂಜಿನಿಯರಿಂಗ್ ಶುಲ್ಕ ಹೆಚ್ಚಳದ ಮಾತೇ ಇಲ್ಲ. ಜೊತೆಗೆ ಸೀಟುಗಳ ಹೆಚ್ಚಳವಾಗಲಿ, ಕಡಿಮೆ ಆಗಲಿ ಯಾವುದೇ ಬದಲಾವಣೆ ಕೂಡ ಇಲ್ಲ ಎಂಬುದಾಗಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss