Monday, August 8, 2022

Latest Posts

ಆಗಸ್ಟ್ 3ರಿಂದ ಇ-ಸ್ವತ್ತು ಖಾತಾ ಸಪ್ತಾಹ: ನ್ಯಾಯಾಲಯದ ಆದೇಶದನ್ವಯ ಆಂದೋಲನ: ಜಿಲ್ಲಾ ಪಂಚಾಯ್ತಿ ಸಿಇಒ ಇಕ್ರಂ

ರಾಮನಗರ: ಜಿಲ್ಲೆಯ 127 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಆಗಸ್ಟ್ 3ರಿಂದ ನಿರಂತರ ಇ-ಸ್ವತ್ತು ಖಾತಾ ಸಪ್ತಾಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಪಂ ಸಿಇಒ ಇಕ್ರಂ ತಿಳಿಸಿದರು.
ನಗರದ ಜಿಲ್ಲಾ ಪಂಚಾಯ್ತಿ ಭವನದ ಮಿನಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಿಂದ ಮಾತನಾಡಿದ ಅವರು. 2013ರಲ್ಲಿ ನ್ಯಾಯಾಲಯದ ಆದೇಶದನ್ವಯ ಇ-ಖಾತಾ ಆಂದೋಲನದ ಹಮ್ಮಿಕೊಳ್ಳುವಂತೆ ರ‍್ಕಾರದ ಸೂಚನೆಯನ್ನು ಜಿಲ್ಲೆಯಲ್ಲಿ ಪಾಲಿಸಲಾಗುತ್ತಿದೆ. ಆದರೆ ಶೇ.19ರಷ್ಟು ಮಾತ್ರ ಸಾಧನೆಯಾಗಿದೆ. ಹೀಗಾಗಿ ಆಗಸ್ಟ್ 3ರಿಂದ ಆರಂಭಿಸಿ ಪ್ರತಿ ತಿಂಗಳ ಮೊದಲ ವಾರ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಇ-ಖಾತಾ ಸಪ್ತಾಹವನ್ನು ಆರಂಭಿಸಲಾಗುತ್ತಿದೆ ಎಂದರು.
ಮಾಹಿತಿಗೆ ಕರಪತ್ರ ವಿತರಣೆ:- ಈಗಾಗಲೇ ಗ್ರಾಪಂಗಳಲ್ಲಿ ಕರ ಪತ್ರಗಳ ವಿತರಣೆ ಆರಂಭವಾಗಿದೆ. ಇ-ಖಾತಾ ಸಪ್ತಾಹಕ್ಕೆ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇ-ಖಾತಾಕ್ಕಾಗಿ ನಾಗರೀಕರು ಸಿದ್ದಪಡಿಸಿಕೊಳ್ಳಬೇಕಾದ ದಾಖಲೆಗಳ ಬಗ್ಗೆ ಕರ ಪತ್ರದಲ್ಲಿ ವಿವರಿಸಲಾಗಿದೆ.
ಗ್ರಾಪಂಗಳಿಗೂ ಸೂಚನೆ ನೀಡಲಾಗಿದ್ದು, ಪ್ರತಿ ತಿಂಗಳ ಮೊದಲವಾರವನ್ನು ಇ-ಖಾತಾಕ್ಕಾಗಿಯೇ ಮೀಸಲಿಡುವಂತೆ ಸೂಚಿಸಲಾಗಿದೆ. ಮುಂದಿನ 3-4ತಿಂಗಳಲ್ಲಿ ಹಂತಹಂತವಾಗಿ ಪ್ರಗತಿ ಸಾಧಿಸಿ ಶೇ.75 ರಷ್ಟು ಗುರಿ ತಲುಪುವ ಸಂಕಲ್ಪ ಮಾಡಿದ್ದೇವೆ ಎಂದು ತಿಳಿಸಿದರು.
ಜಿಪಂ ಸಹಾಯಕ ಕರ‍್ಯರ‍್ಶಿ ರಾಮನಕೃಷ್ಣಪ್ಪ ಮಾತನಾಡಿ, ಮುಂಬರುವ ಮೂರುತಿಂಗಳು ಪ್ರತಿ ಮಾಹೆಯ ಮೊದಲ ವಾರ ಬೆಳಿಗ್ಗೆ 10:30ರಿಂದ 1:30ರವರೆಗೆ ನಿಯೋಜಿತ ಸಿಬ್ಬಂದಿ ಗ್ರಾಮಗಳಲ್ಲಿ ಲಭ್ಯವಿರುವರು ಎಂದರು.
ಸಲ್ಲಿಸಬೇಕಾದ ದಾಖಲೆಗಳ ಮಾಹಿತಿ:- ವಸತಿ ಯೋಜನೆಯಡಿ ಮಂಜೂರಾದ ಆಸ್ತಿ, ಗ್ರಾಮ ಠಾಣಾ ಆಸ್ತಿ, ಬಿ.ಎಂ.ಆರ್.ಡಿ.ಎ, ಬಿ.ಎಂ.ಐ.ಸಿ. ಎ.ಪಿ.ಎ ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರದ ಅನುಂಓದಿತವಾದ ಬಡಾವಣೆ 14.6.2013ರ ಪರ‍್ವದಲ್ಲಿ ಸೃಜನೆಯಾಗಿರುವ ಕಟ್ಟಡ ಪರವಾನಿಗೆ ಪಡೆದು ಕಟ್ಟಿರುವ ಮನೆಗಳು, 16.11.2993ರ ಹಿಂದೆ ಭೂ ಪರಿರ‍್ತನೆಯಾಗಿ ಗ್ರಾಮ ಪಂಚಾಯ್ತಿಯಿಂದ ಅನುಮೋದನೆ ಗೊಂಡ ಆಸ್ತಿಗಳ ಮಾಲೀಕರು ನಮೂನೆ 9 ಮತ್ತು 11, 11ಬಿ ಪಡೆಯಲು ಸಲ್ಲಿಸಬೇಕಾದ ದಾಖಲೆಗಳ ಬಗ್ಗೆ ಮಾಹಿತಿ ನೀಡಿದರು. ಫೌತಿ ಖಾತೆಗಳ ವಿಚಾರದಲ್ಲಿ ನೋಂದಾಯಿತ ಪಾರಿಕತ್‌ಗಳಿದ್ದರೆ ಅವುಗಳಿಗೆ ಖಾತಾ ಮಾಡಿ ಕೊಡಲಾಗುವುದು, ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳು, ತೀರಾ ಸಮಸ್ಯೆ ಇರುವ ಪ್ರಕರಣಗಳನ್ನು ಸದ್ಯ ಪರಿಗಣಿಸಲಾಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಮಸ್ಯೆ ದಾಖಲಿಸಲು ಸಹಾಯವಾಣಿ:- ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ ತಲಾ ಇಬ್ಬರು ಮೋಜಿಣಿದಾರರಿದ್ದಾರೆ. ಹೀಗಾಗಿ ಮೋಜಿಣಿಯಾಗಬೇಕಾದ ಪ್ರಕರಣಗಳು ಸ್ಪಲ್ಪ ವಿಳಂಬವಾಗುವ ಸಾಧ್ಯತೆ ಇದೆ. ಆದರೆ ಅವರೊಂದಿಗೆ ರ‍್ಚೆಗಳು ನಡೆದಿದ್ದು, ಆದ್ಯತೆ ಮೇರೆಗೆ ಅವರು ಕರ‍್ಯನರ‍್ವಹಿಸಲಿದ್ದಾರೆ. ಇ-ಖಾತಾ ಸಪ್ತಾಹಕ್ಕೆ ಸಂಬಂಧಿಸಿದAತೆ ಅನಿವರ‍್ಯ ಸಂರ‍್ಭಗಳಲ್ಲಿ ನಾಗರೀಕರು ಜಿಪಂ ಸ್ಥಾಪಿಸಿರುವ ಸಹಾಯವಾಣಿ 080-27276716ಗೆ ಕರೆ ಮಾಡಿ ಸಮಸ್ಯೆ ದಾಖಲಿಸಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss