Sunday, April 11, 2021

Latest Posts

ಆಗಾಗ ಕಣ್ಣಿನ ಮೇಲೆ ಕುರ ಆಗತ್ತಾ? ನಿರ್ಲಕ್ಷ್ಯ ಮಾಡದೇ ಈ ಮನೆಮದ್ದು ಟ್ರೈ ಮಾಡಿ..

ನಮ್ಮ ದೇಹದಲ್ಲಿ ವಿಷಕಾರಿ ಅಂಶ ಹೆಚ್ಚಾದರೆ, ನಂಜಿನ ಅಂಶ ಹೆಚ್ಚಾದರೆ ಕುರಗಳು ಏಳುತ್ತವೆ. ಕುರಗಳು ಒಡೆಯುವಾಗ ಯಮಯಾತನೆ ಎನಿಸುತ್ತದೆ. ಇನ್ನು ಕೆಲವರಿಗೆ ಪದೇ ಪದೇ ಕಣ್ಣುಗಳ ಮೇಲೆ ಕುರಗಳು ಏಳುತ್ತವೆ. ಈ ಕುರಗಳನ್ನು ನಿರ್ಲಕ್ಷಿಸುವಂತಿಲ್ಲ. ಕುರ ಆಗುವುದು ಮಿತಿ ಮೀರಿದರೆ ಶಸ್ತ್ರ ಚಿಕಿತ್ಸೆ ಮಾಡಬೇಕಾಗುತ್ತದೆ. ಹಾಗಾಗಿ ಮೊದಲ ಹಂತದಲ್ಲಿದ್ದಾಗಲೇ ಈ ಮನೆಮದ್ದುಗಳನ್ನು ಟ್ರೈ ಮಾಡಿ..

ಕುಂಕುಮ:
ಕುಂಕುಮಕ್ಕೆ ಕೊಬ್ಬರಿ ಎಣ್ಣೆಯನ್ನು ಸೇರಿಸಿಕೊಂಡು ಕಣ್ಣಿನ ಮೇಲೆ ಎದ್ದಿರುವ ಕುರಕ್ಕೆ ಹಚ್ಚಬೇಕು. ಇದರಿಂದ ಕುರ ಕಡಿಮೆ ಆಗುತ್ತದೆ.

ಬಾಳೆಕಾಯಿ:
ಬಾಳೆಕಾಯಿಯನ್ನು ಮುರಿದರೆ ಒಂದು ರೀತಿಯಲ್ಲಿ ಅಂಟಿನ ಅಂಶ ಬರುತ್ತದೆ. ಆ ಅಂಟಿನ ಅಂಶವನ್ನು ಕಣ್ಣುಗಳಿಗೆ ಹಚ್ಚುವುದರಿಂದ  ಕುರ ಕಡಿಮೆ ಆಗುತ್ತದೆ.

ಉಪ್ಪು ನೀರು:
ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಅದರಲ್ಲಿ ಬಟ್ಟೆ ಅದ್ದಿ, ಕುರವು ಆಗಿರುವ ಜಾಗದಲ್ಲಿ ಇಡಿ. ಹೀಗೆ ಹಲವು ಬಾರಿ ಮಾಡೋದರಿಂದ ಕಣ್ಣಿನ ಕುರವು ಬೇಗನೇ ಹಣ್ಣಾಗಿ ಹೊರಬರುತ್ತದೆ.

ಲಿಂಬು ಬೀಜ:
ಲಿಂಬು ಬೀಜವನ್ನು ತೇಯ್ದು ಅದರ ರಸವನ್ನು ಕುರ ಆಗಿರುವ ಜಾಗಕ್ಕೆ ಹಚ್ಚಿರಿ. ಬೇಗ ಕುರ ಹಣ್ಣಾಗುತ್ತದೆ.

ಅಂಗೈ:
ಅಂಗೈಗಳನ್ನು ಒಂದಕ್ಕೊಂದು ಉಜ್ಜಿ. ನಂತರ ಅಂಗೈ ಬಿಸಿಯನ್ನು ಕಣ್ಣುಗಳ ಮೇಲೆ ಇಟ್ಟುಕೊಳ್ಳಿ

ಆಲೋವೇರಾ:
ಆಲೋವೇರಾ ಜೆಲ್ ಗಳನ್ನು ಕಣ್ಣಿನ ಕುರದ ಮೇಲೆ ಹಚ್ಚಿಕೊಂಡರೆ ಉರಿ, ನೋವು ಕಡಿಮೆ ಆಗುತ್ತದೆ. ಮತ್ತು ಕುರ ಹಣ್ಣಾಗಲು ಸಹಾಯಮಾಡುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss