Tuesday, July 5, 2022

Latest Posts

ಆಗಾಗ ಗೋಮೂತ್ರ ಸೇವಿಸುತ್ತೀರಾ? ಗೋಮೂತ್ರದಿಂದ ಏನೆಲ್ಲಾ ಪ್ರಯೋಜನವಿದೆ ನೋಡಿ…

ಗೋ ಮೂತ್ರ ಸಾವಿರಾರೂ ರೋಗಗಳಿಗೆ ದಿವ್ಯ ಔಷಧಿ. ಇದರಲ್ಲಿ ಪೊಟ್ಯಾಷಿಯಂ, ಕ್ಯಾಲ್ಸಿಯಂ, ಕ್ಲೋರೈಡ್, ಯೂರಿಯಾ, ಅಮೋನಿಯಾ, ಸಲ್ಫರ್, ಯೂರಿಕ್ ಆ್ಯಸಿಡ್, ಫಾಸ್ಫೇಟ್, ಮ್ಯಾಂಗನೀಸ್, ಕಾರ್ಬೋಲಿಕ್ ಆ್ಯಸಿಡ್ ನಂತಹ ಖನಿಜ ಲವಣಗಳಿವೆ. ಅಷ್ಟೇ ಅಲ್ಲದೇ ವಿಟಮಿನ್ ಅಂಶಗಳೂ ಇದೆ ಎಂದು ವೈಜ್ಞಾನಿಕವಾಗಿ ಪತ್ತೆಯಾಗಿದೆ. ಇದನ್ನು ಸೇವಿಸಿದರೆ ನಾನಾ ರೋಗಗಳು ನಿವಾರಣೆಯಾಗುತ್ತದೆ.

ಲಿವರ್ ಸಮಸ್ಯೆ:
ಲಿವರ್ ತೊಂದರೆಗಳಿದ್ದರೆ‌ ಗೋ ಮೂತ್ರವನ್ನು ಪ್ರತಿ ದಿನ ಮೂರು ಚಮಚ ಸೇವಿಸಿದರೂ ಸಾಕು ತಿಂಗಳೊಳಗಾಗಿ ಲಿವರ್ ಸಮಸ್ಯೆ ಸರಿಯಾಗಿತ್ತದೆ.

ಹಲ್ಲು ನೋವು:
ವಿಪರೀತ ಹಲ್ಲು ನೋವು ಇದ್ದಾಗ ಗೋ ಮೂತ್ರಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿಕೊಂಡು ಬಾಯಿ ಮುಕ್ಕಳಿಸುವುದರಿಂದ ಹಲ್ಲು ನೋವು ಕಡಿಮೆ ಆಗುತ್ತದೆ. ಹಲ್ಲಿನಲ್ಲಿರುವ ಕೀಟಾಣುಗಳನ್ನು ನಾಶಮಾಡುವ ಶಕ್ತಿ ಗೋ ಮೂತ್ರಕ್ಕಿದೆ.

ನಾಲಿಗೆ ತೆಳ್ಳಗಾಗಲು:
ಚಿಕ್ಕ ಮಕ್ಕಳಿಗೆ ಹಾಲೊಂದನ್ನೇ ಕುಡಿದು ನಾಲಿಗೆ ಬಿಳಿಯಾಗಿರುತ್ತದೆ. ಮತ್ತು ನಾಲಿಗೆ ದಪ್ಪವಾಗಿರುತ್ತದೆ. ನಾಲಿಗೆ ದಪ್ಪವಾದರೆ ಅವರು ಮಾತನಾಡಲು ಪ್ರಯತ್ನಿಸುವಲ್ಲಿ ಹಿಂದೇಟು ಹಾಕುತ್ತಾರೆ. ಹಾಗಾಗಿ ವಾರಕ್ಕೆ ಒಮ್ಮೆ ಮಕ್ಕಳಿಗೆ ಒಂದು ಚಮಚ ಗೋ ಮೂತ್ರ ಕುಡಿಸಿ. ಮತ್ತು ಒಂದು ಬಟ್ಟೆಯನ್ನು ಗೋ ಮೂತ್ರದಲ್ಲಿ ಅದ್ದಿ ಅವರ ನಾಲಿಗೆಗೆ ತಿಕ್ಕಿ. ಇದರಿಂದ ನಾಲಿಗೆ ತೆಳ್ಳಗಾಗುತ್ತದೆ. ಮತ್ತು ನಾಲಿಗೆ ಬಿಳಿ ಆಗಿರುವುದು ಹೋಗುತ್ತದೆ.

ಜಂತು ಹುಳ ನಿವಾರಣೆ:
ಜಂತು ಹುಳಗಳು ಹೆಚ್ಚಾದಾಗ ಹೊಟ್ಟೆ ಕಡಿತ ಬರುತ್ತದೆ, ಕೂದಲು ಉದರುತ್ತದೆ. ಅಂಥ ಸಂದರ್ಭದಲ್ಲಿ ಗೋ ಮೂತ್ರ ಸೇವನೆ ಮಾಡಬೇಕು ಇದರಿಂದ ಬೇಗ ಹೊಟ್ಟೆ ಕಡಿತ ಕಡಿಮೆ ಆಗುತ್ತದೆ. ಗೋ ಮೂತ್ರದಲ್ಲಿ ನಮ್ಮ ದೇಹದಲ್ಲಿ ಪರಜೀವಿಗಳು ವಾಸಿಸುವುದನ್ನು ಕಡಿಮೆ ಮಾಡುವ ಶಕ್ತಿ ಇದೆ.

ರಕ್ತ ಶುದ್ಧಿ:
ಗೋ ಮೂತ್ರಕ್ಕೆ ರಕ್ತ ಶುದ್ಧಿ ಮಾಡುವ ಗುಣವಿರುವುದರಿಂದ ಇದನ್ನು ಕುಡಿದರೆ ಅದು ರಕ್ತ ಶುದ್ಧವಾಗಿ ಇಡುತ್ತದೆ. ಸಕ್ಕರೆ ಕಾಯಿಲೆ ನಿಯಂತ್ರಣ ಮಾಡುತ್ತದೆ.

ಕ್ಯಾನ್ಸರ್:
ಇತ್ತೀಚೆಗೆ ಕ್ಯಾನ್ಸರ್ ರೋಗವನ್ನು ತಡೆಯುವ ಶಕ್ತಿ ಗೋ ಮೊತ್ರಕ್ಕಿದೆ ಎಂದು ಚೀನಾ ವೈದ್ಯಕೀಯ ಕ್ಷೇತ್ರ ಸಂಶೋಧನೆ ಮಾಡಿದೆ. ಅಷ್ಟೇ ಅಲ್ಲದೇ ಗೋ ಮೂತ್ರವನ್ನು ಇಲಿಗಳಿಗೆ ಕುಡಿಸಿ ಇದರಿಂದ ಹೃದಯ ಸಂಬಂಧಿ ರೋಗ ಕಡಿಮೆ ಆಗುವುದನ್ನು ಕಂಡುಹಿಡಿದಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss