Wednesday, August 10, 2022

Latest Posts

ಆಗಾಗ ತಲೆಸುತ್ತು ಬರುತ್ತಿದೆಯಾ? ತಲೆಸುತ್ತು ಏಕೆ ಬರುತ್ತದೆ? ಬಂದಾಗ ಏನು ಮಾಡಬೇಕು?

ಶಾಲೆಯಲ್ಲಿ ಓದುತ್ತಿದ್ದಾಗ ಶನಿವಾರ ಬಂತೆಂದರೆ ಬೇಜಾರು. ಏಕೆಂದರೆ ಶನಿವಾರ ಬಿಸಿಲಿನಲ್ಲಿ ನಿಲ್ಲಿಸಿ ಡ್ರಿಲ್ ಮಾಡಿಸುತ್ತಿದ್ದರು. ಆ ವ್ಯಾಯಾಮಗಳನ್ನು ಸರಿಯಾಗಿ ಮಾಡದಿದ್ದರೆ ಒದೆ ಬೀಳುತ್ತಿತ್ತು. ಆಗೆಲ್ಲ ಪ್ರತಿ ಶನಿವಾರವೂ ಮೂರರಿಂದ ನಾಲ್ಕು ಮಂದಿ ತಲೆ ಸುತ್ತಿ ಬಿಳುತ್ತಿದ್ದರು. ಆಗ ಟೀಚರ್‌ಗಳು ಅವರು ತಿಂಡಿ ತಿಂದಿಲ್ಲ ಹಾಗಾಗಿ ತಲೆ ಸುತ್ತಿದೆ ಎನ್ನುತ್ತಿದ್ದರು. ಡ್ರಿಲ್‌ನಿಂದ ತಪ್ಪಿಸಿಕೊಳ್ಳಲು ಸುಮ್ಮನೆ ತಲೆ ಸುತ್ತಿದಂತೆ ನಾಟಕ ಆಡಿ ಕೂತಿದ್ದು ಇದೆ. ಅಷ್ಟಕ್ಕೂ ಈ ತಲೆಸುತ್ತು ಏಕೆ ಬರುತ್ತದೆ? ತಲೆಸುತ್ತು ಬಂದಾಗ ಏನು ಮಾಡಬೇಕು?
ತಲೆಸುತ್ತು ಬರಲು ಕಾರಣಗಳೇನು?

  • ಮೈಗ್ರೇನ್
  • ಮೆಡಿಕೇಶನ್ಸ್
  • ಆಲ್ಕೋಹಾಲ್
  • ಊಟ ತಿಂಡಿ ಸಮಸ್ಯೆ
  • ಬ್ಲಡ್ ಪ್ರೆಶರ್ ಡ್ರಾಪ್ ಆದಾಗ
  • ಆನ್ಕ್ಸೈಟಿ ಇದ್ದರೆ
  • ಬಿಸಿಲಿಗೆ ಸ್ಟ್ರೋಕ್
  • ಡೀಹೈಡ್ರೇಶನ್
    ತಲೆಸುತ್ತು ಬಂದಾಗ ಏನು ಮಾಡಬೇಕು?
  • ತಕ್ಷಣ ಕುಳಿತುಕೊಳ್ಳಿ ಅಥವಾ ಮಲಗುವ ಸಾಧ್ಯವಾದರೆ ಮಲಗಿ. ತಲೆಸುತ್ತು ಹೋಗುವವರೆಗೂ ಎದ್ದೇಳಬೇಡಿ.
  • ಯಾರದ್ದಾದರೂ ಸಹಾಯದೊಂದಿಗೆ ಎದ್ದೇಳಿ, ನಿಂತಾಗ ತಲೆಸುತ್ತು ಬಂದರೆ ಬಾಡಿ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದರೆ ತಲೆಗೆ ಏಟಾಗುವ ಸಾಧ್ಯತೆ ಇದೆ.
  • ಬ್ಯಾಲೆನ್ಸ್ ಚೆನ್ನಾಗಿ ಆಗುವ ಯೋಗದಂಥ ಅಭ್ಯಾಸ ರೂಡಿಸಿಕೊಳ್ಳಿ.
  • ಸಡನ್ ಆಗಿ ಕೂರುವುದು, ಏಳುವುದು ಯಾವ ಆಕ್ಷನ್ ಕೂಡ ಬೇಡ.
  • ತಲೆಸುತ್ತು ಬಂದ ಸಂದರ್ಬದಲ್ಲಿ ಗಾಡಿ ಓಡಿಸುತ್ತಿದ್ದರೆ ಗಾಡಿ ಸೈಡ್‌ಗೆ ಹಾಕಿ ಕುಳಿತುಕೊಳ್ಳಿ.
  • ಕಾಫಿ,ಆಲ್ಕೋಹಾಲ್ ಹಾಗೂ ಟೊಬ್ಯಾಕೋದಿಂದ ದೂರ ಇರಿ.
  • ದಿನಕ್ಕೆ ಎಂಟಿಕ್ಕಿಂತ ಹೆಚ್ಚು ಲೋಟ ನೀರು ಕುಡಿಯಿರಿ.
  • ನಿಮ್ಮ ಆಹಾರದಲ್ಲಿ ಹಣ್ಣು ತರಕಾರಿ ಸೊಪ್ಪು ಬೇಳೆ ಕಾಳುಗಳು ಇದ್ದೇ ಇರಲಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss