ಹೊಸದಿಗಂತ ವರದಿ, ಕೋಲಾರ:
ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ.ಗೌಡ ಆಯ್ಕೆ ಹಿನ್ನಲೆಯಲ್ಲಿ ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ವಿಧಾನಸಭೆ ಉಪಚುನಾವಣೆ ಮಾತ್ರವಲ್ಲ, ವಿಧಾನ ಪರಿಷತ್ನ ನಾಲ್ಕು ಕಡೆ ಪದವೀಧರರುಮತ್ತು ಶಿಕ್ಷಕರು ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದರು.
ಬಿಜೆಪಿ ವಿರುದ್ದ ಕಣಕ್ಕಿಳಿದಿದ್ದ ಜೆಡಿಎಸ್ ಮತ್ತುಕಾಂಗ್ರೆಸ್ ಪಕ್ಷಗಳಿಗೆ ತೀವ್ರ ಮುಖಭಂಗವಾಗಿದ್ದು, ನಿನ್ನೆ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡ ಡಿ.ಕೆ.ಸುರೇಶ್ ಮತದಾರರು ಪ್ರಬುದ್ದರಲ್ಲ ಎಂದು ಹೇಳಿಕೆ ನೀಡಿ ತಮ್ಮ ಹತಾಶೆ ತೋಡಿಕೊಂಡಿದ್ದರು ಎಂದು ಟೀಕಿಸಿದರು.
ಆದರೆ ಈಗ ಪದವೀಧರ ಹಾಗೂ ಶಿಕ್ಷಕರು ಬಿಜೆಪಿ ಬೆಂಬಲಿಸುವ ಮೂಲಕ ಮತದಾರರು ಪ್ರಬುದ್ದರು ಆದರೆ ಕಾಂಗ್ರೆಸ್ ನಾಯಕರು ಪ್ರಬುದ್ದರಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ವಿಜಯೋತ್ಸವದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ, ಪ್ರಧಾನ ಕಾರ್ಯದರ್ಶಿ ರಾಜೇಶ್, ಹಿರಿಯ ಮುಖಂಡರಾದ ವಿಜಯಕುಮಾರ್, ಕೆಂಬೋಡಿನಾರಾಯಣಸ್ವಾಮಿ, ಕೆಯುಡಿಎ ಅಧ್ಯಕ್ಷ ಓಂ ಶಕ್ತಿ ಚಲಪತಿ, ಹನುಮಂತಪ್ಪ, ರಮೇಶ್, ಎಸ್ಸಿ ಮೋರ್ಚಾದ ವೆಂಕಟೇಶ್, ಮಂಜುಳಾ ಮತ್ತಿತರರು ಪಾಲ್ಗೊಂಡಿದ್ದರು.