Saturday, July 2, 2022

Latest Posts

ಆಟದ ಮೈದಾನ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಿದ ಶ್ವಾನ- ಕುರಿ!

ಹೊಸದಿಗಂತ ಆನ್ ಲೈನ್ ಡೆಸ್ಕ್:  

ವೆರ್ಮೊಂಟ್ ಸಮುದಾಯದ ಆಟದ ಮೈದಾನ ನಿರ್ಮಾಣಕ್ಕೆ ಮೇಯರ್ ಆಗಿ ಆಯ್ಕೆ ಆಗಿದ್ದ ಕುರಿ ಹಾಗೂ ಶ್ವಾನ ದೇಣಿಗೆ ಸಂಗ್ರಹಿಸಲು ಸಹಾಯ ಮಾಡಿದೆ. ಈ ಮೂಲಕ ಆಟದ ಮೈದಾನವನ್ನು ಸ್ಥಳೀಯ ಮಕ್ಕಳಿಗೆ ನೆರವಾಗಲು ಈ ಕೆಲಸ ಮಾಡಲಾಗ್ತಿದೆ.

2018ರಲ್ಲಿ ಫೇರ್ ಹೆವನ್ ನಿವಾಸಿಗಳು ಲಿಂಕನ್ ಮೇಕೆಯನ್ನು ಮೇಯರ್ ಆಗಿ ಆಯ್ಕೆ ಮಾಡಿದ್ದರು. ಆ ವೇಳೆ  ಲಿಂಕನ್ ಸುಮಾರು 10 ಸಾವಿರ ಡಾಲರ್ ದೇಣಿಗೆ ಸಂಗ್ರಹಕ್ಕೆ ಸಹಾಯ ಮಾಡಿದೆ. ಇದೀಗ ಪ್ರಸ್ತುತ ಮೇಯರ್ ಕ್ಯಾವಲಿಯನ್ ಕಿಂಗ್ ಚಾರ್ಲ್ಸ್ ಮರ್ಫಿ ಶ್ವಾನ 20 ಸಾವಿರ ಡಾಲರ್ ದೇಣಿಗೆ ಸಂಗ್ರಹಿಸಿದೆ ಎಂದು ಟೌನ್ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ.

ಆಟದ ಮೈದಾನ ನಿರ್ಮಾಣಕ್ಕೆ ಮರ್ಫಿಯ ಮಾಲೀಕೆ ಲಿಂಡಾ ಬಾರ್ಡರ್, ಟೀ ಶರ್ಟ್ಗಳನ್ನು ಮಾರಾಟ ಮಾಡೋ ಮೂಲಕ ಹಣ ಸಂಗ್ರಹಿಸೋದು ಸುಲಭ ಎಂದು ಭಾವಿಸಿದ್ದರು. ಆದರೆ ಕೊರೋನಾ ದಿಂದ ಇದು ಸಾಧ್ಯವಾಗಲಿಲ್ಲ. ಹೀಗಾಗಿ ಮಾಸ್ಕ್ಗಳನ್ನ ಮಾರಾಟ ಮಾಡೋಕೆ ನಿರ್ಧರಿಸಿದ್ದಾರೆ. ಇದಕ್ಕಾಗಿ 1000 ಮಾಸ್ಕ್ಗಳನ್ನು  ತಯಾರಿಸಲಾಗಿದ್ದು, ಪ್ರೇಮಿಗಳ ದಿನಾಚರಣೆಗೆ ಇನ್ನೊಂದು ಸುತ್ತು ಮಾಸ್ಕ್ ತಯಾರಿಸುವ ಯೋಚನೆಯಲ್ಲಿದ್ದಾರೆ. ಅಲ್ಲದೇ ಬ್ಯಾಸ್ಕೆಟ್ ರಾಫಲ್ಗಳನ್ನೂ ಮಾರಾಟ ಮಾಡಿದ್ದಾರೆ.

ಇನ್ನು ಈ ಪಟ್ಟಣಕ್ಕೆ ಕೆಲ ದಿನಗಳ ಹಿಂದೆ ಭೂಮಿ ಹಾಗೂ ಜನಸಂರಕ್ಷಣಾ ನಿಧಿಯಿಂದ 50 ಸಾವಿರ ಡಾಲರ್ ಅನುದಾನ ನೀಡಲಾಗಿದೆ. ಆದರೆ ಇಷ್ಟೆಲ್ಲ ಮಾಡಿದ್ರೂ ಸಹ ಮೇಯರ್ ಶ್ವಾನಕ್ಕೆ ಮೈದಾನಕ್ಕೆ ಬರಲು ಆಗೋದಿಲ್ಲ. ಯಾಕಂದ್ರೆ ನಾಯಿಗೆ ಅನುಮತಿ ಇಲ್ಲ ಎಂಬ ಬೋರ್ಡ್ನ್ನು ಮೈದಾನಕ್ಕೆ ಹಾಕಲಾಗಿದೆ ಎಂದು ಬಾರ್ಡರ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss