ಹೊಸದಿಗಂತ ವರದಿ, ವಿಜಯಪುರ:
ಮಕ್ಕಳಿಬ್ಬರು ಆಟವಾಡುತ್ತಿದ್ದ ವೇಳೆ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಚಿಕ್ಕ ಆಸಂಗಿ ಗ್ರಾಮದ ಜಮೀನೊಂದರಲ್ಲಿ ನಡೆದಿದೆ.
ಮೃತಪಟ್ಟವರನ್ನು ಚಿಕ್ಕ ಆಸಂಗಿ ಗ್ರಾಮದ ಆಕಾಶ ಮಹಾದೇವ ಬೆನ್ನೂರ (4), ಬೋರಮ್ಮ ಸಂಗಣ್ಣ ಬೆನ್ನೂರ (4) ಎಂದು ಗುರುತಿಸಲಾಗಿದೆ. ಮಕ್ಕಳಾದ ಆಕಾಶ ಬೆನ್ನೂರ, ಬೋರಮ್ಮ ಬೆನ್ನೂರ ಆಟವಾಡುತ್ತ ಹೋಗಿ, ಜಮೀನಿನ ಕೃಷಿ ಹೊಂಡದ ನೀರಲ್ಲಿ ಬಿದ್ದು, ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಬಸವನಬಾಗೇವಾಡಿ ಡಿವೈಎಸ್ ಪಿ ಅರುಣಕುಮಾರ ಕೊಳೂರ, ಕೊಲ್ಹಾರ ಪಿಎಸ್ ಐ ಸಿದ್ದು ಯಡಹಳ್ಳಿ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಈ ಸಂಬಂಧ ಕೊಲ್ಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.