Thursday, June 30, 2022

Latest Posts

ಆಟೋಗಳ ಗಾಲಿಗಳನ್ನೂ ಬಿಡದ ಖದೀಮರು: ಮಾಲೀಕರ ಪರದಾಟ

ಹೊಸದಿಗಂತ ವರದಿ,ಕೊಪ್ಪಳ:

ಮನೆಮನೆ ಕಳದಳತನ ಮಾಡುತ್ತಿದ್ದ ಕಳ್ಳರು ಈಗ ಆಟೋ ಗಾಲಿಗಳನ್ನು ಕಳ್ಳತ‌ನಕ್ಕೆ ಮುಂದಾಗಿ ಈಗ ನಗರದಲ್ಲಿ ಸುಮಾರು 10ಕ್ಕೂ ಹೆಚ್ಚು ಆಟೋಗಳ ಗಾಲಿ ಕಳ್ಳತನ ಮಾಡಿದ್ದಾರೆ.

ತಡರಾತ್ರಿ ನಗರದಲ್ಲಿ ಆಟೋಗಳ ಗಾಲಿಗಳನ್ನು ಕಳ್ಳತನ ಮಾಡಲಾಗಿದ್ದು, ಕಪಾಲಿಗಲ್ಲಿ.ಕುರುಬರ ಓಣಿ.ಪಲ್ಲೇದರ ಓಣಿ ನಂದೀನಗರಗಳಲ್ಲಿ ಸುಮಾರು 10 ಗಾಲಿಗಳನ್ನು ಕಳುವು ಮಾಡಿದ್ದಾರೆ .

ಕಳೆದ ಒಂದು ತಿಂಗಳಿಂದ ಈ ರೀತಿಯ ಪ್ರಕರಣಗಳು ಪದೇ ಪದೇ ನಡೆಯುತ್ತಲೇ ಇವೆ. ಒಂದು ತಿಂಗಳ ಅವಧಿಯಲ್ಲಿ 10 ಕ್ಕೂ ಹೆಚ್ಚು ಅಟೋಗಳ ಗಾಲಿಗಳನ್ನು ಕದ್ದೊಯ್ಯಲಾಗಿದೆ. ಈ ಕುರಿತು ಪೋಲಿಸರಿಗೂ ಮಾಹಿತಿ ನೀಡಲಾಗಿದ್ದರೂ ಸಹ ಇದುವರೆಗೆ ಯಾವುದೇ ಕ್ರಮವಾಗಿಲ್ಲ ಎಂದು ಅಟೋ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ .

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss