Wednesday, July 6, 2022

Latest Posts

ಆಟೋ, ಲಘುವಾಹನಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಕುರಿ, ಕೋಳಿ, ತರಕಾರಿ ಸಾಗಣೆ: ಪೊಲೀಸರಿಂದ ‘ದಂಡ’ ಪ್ರಯೋಗ

ಹೊಸ ದಿಗಂತ ವರದಿ, ಹುಣಸಗಿ :

ಹುಣಸಗಿ ಪಟ್ಟಣದ ವಾರದ ಸಂತೆ ರವಿವಾರ ಆಟೋ, ಲಘುವಾಹನಗಳಲ್ಲಿ ಕುರಿ, ಕೋಳಿ, ತರಕಾರಿ, ಅವಶ್ಯಕ ಸಾಮಾನುಗಳ ಸರಬರಾಜಿಗೆ ಅಗತ್ಯ ಸಾಮರ್ಥ್ಯಕ್ಕಿಂತ ಹೆಚ್ಚು ಸಾಗಣೆ ಮಾಡುತ್ತಿರುವ ಕೇರಿಯರ್ ಹೊಂದಿರುವ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ದಂಡ ಹಾಕಿ ಬಿಸಿ ಮುಟ್ಟಿಸಿದರು.
ಹುಣಸಗಿ ತಾಲೂಕಿನ ವಾರದ ಸಂತೆ ದಿನ ವಿವಿಧ ಮಾರುಕಟ್ಟೆಯ ವಿಕ್ರಯದಂದ 20 ಕೋ.ರೂ.ಗಳ ವಹಿವಾಟು ನಡೆಯುವುದು. ಯಾದಗಿರಿ ಜಿಲ್ಲೆಯಲ್ಲಿ ಅತಿ ದೊಡ್ಡ ಸಂತೆ ಹುಣಸಗಿಯದಾಗಿದೆ. ಸಂತೆ ದಿನ ಅಂದಾಜು 500 ರಿಂದ 700 ವರೆಗೆ ಆಟೋ, ಲಘುವಾಹನಗಳ ಒಡಾಟ ಇರುವುದು. ಸಾವಿರಾರು ಜನರ ಒಡಾಟ ಇರುವುದು ಎನ್ನಲಾಗಿದೆ. ಸಂತೆಯ ದಿನ ಒಂದಾದರೂ ಅಪಘಾತದ ಸುದ್ದಿ ಕೇಳಿ ಬರುವುದು ಸರ್ವೆಸಾಮಾನ್ಯ ಸಂಗತಿಯಾಗಿದೆ. ಅಪಘಾತ ತಡೆಯಲು ಪೊಲೀಸರು ಸಾಮಾಜಿಕ ಜಾಲ ತಾಣ ಹಾಗೂ ಮಾಧ್ಯಮ ಬಳಸಿಕೊಂಡು ಹರ ಸಾಹಸ ಪಡುತ್ತಿದ್ದಾರೆ.
ಆದರೆ ವಾಹನ ಮಾಲಿಕರ-ಸವಾರರು ಯಾರು ಮಾತು ಕೇಳುವದಂತಾಗಿದೆ. ಇತ್ತೀಚಿನ ಮೋಟಾರು ವಾಹನ ಕಾಯಿದೆಯಂತ ಪೊಲೀಸರು ಸಾಕಷ್ಟು ತಿಳುವಳಿಕೆ ಹಾಗೂ ಎಚ್ಚರಿಕೆ ನೀಡಿದರು ಮಾತು ಕೇಳುತ್ತಿಲ್ಲಾ ಎನ್ನುವುದು ಪೊಲೀಸರ ಹಾಕಿರುವ ದಂಡದಿAದ ತಿಳಿದು ಬರುತ್ತದೆ.
ಟೇಪ್ ಹಾವಳಿಗೆ ಬೇಸತ್ತ ಜನ;
ದ್ವಿಚಕ್ರ ವಾಹನ ಸವಾರರು ಮೊಬಾಯಿಲ್ ಬಳಸುತ್ತಾ ಚಲಿಸುವುದು. ಟ್ರಾಕ್ಟರ್, ಆಟೋ ಟೇಪ್ ಹಚ್ಚಿ ಶಬ್ದ ಮಾಲಿನ್ಯವನ್ನು ಉಂಟು ಮಾಡುತ್ತಿರುವದರಿಂದ ಕಾನೂನು ಪ್ರಕಾರ ಬಿಗಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಟೇಪ್ ಹಾವಳಿಗೆ ಕೊನೆಯೇ ಇಲ್ಲವೇ. ರಾಜನಕೋಳೂರು, ಗೆದ್ದಲಮರಿ, ಹುಣಸಗಿ ಪಟ್ಟಣ ಸೇರಿದಂತೆ ದೇವಸ್ಥಾನ, ಶಾಲೆ, ಅಂಗಡಿ, ಮಳಿಗೆ, ಊರು, ಮನೆಗಳು ಇದ್ದರೂ ಕೂಡ ಯಾರ ಪರಿವೆ ಇಲ್ಲದೆ ಅಶ್ಲೀಲ ಹಾಡು ಹಾಕಿಕೊಂಡು ವಾಹನ ಚಲಾಯಿಸುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ.
ಲೆಡ್ ದೀಪಗಳ ಹಾವಳಿ; ರಾತ್ರಿಯಾದರೆ ಸಾಕು ಆಟೋ, ಬೈಕ್, ಲಘುವಾಹನ ಗಳಿಗೆ ಮೈ ತುಂಬ ಲೆಡ್ ದೀಪಗಳ ಸರಮಾಲೆ ಹಾಕೊಂಡು ಎದುರು ಬರುವ ವಾಹನಗಳ ಅಪಘಾತಕ್ಕೆ ಕಾರಣವಾಗುತ್ತಿದಾರೆ. ಇದನ್ನು ಪೊಲೀಸರು ನಿಯಂತ್ರಿಸಲಿ ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಡಿವೈಎಸ್‌ಪಿ, ಸಿಪಿಐ ಅವರ ಮಾರ್ಗದರ್ಶನದಲ್ಲಿ ರವಿವಾರ ಇಪ್ಪತ್ತಕ್ಕೂ ಹೆಚ್ಚು ಆಟೋಗಳ ಮೇಲೆ ಕ್ಯಾರಿಯರ್ ಹೊಂದಿರುವ ಆಟೋಗಳನ್ನು ವಶಕ್ಕೆ ಪಡೆದು ಕಠಿಣ ಕ್ರಮ ತೆಗೆದುಕೊಂಡಿದೆ. ಯಾರಾದರೂ ಕಾನೂನು ಮೀರಿ ವಾಹನ ಚಲಾಯಿಸಿದರೆ, ಆಟೋಗಳಲ್ಲಿ ಹೆಚ್ಚು ಪ್ರಯಾಣಿಕರನ್ನು ಕೂಡಿಸಿಕೊಂಡು ವಾಹನ ಚಲಾಯಿಸಿದರೆ, ಟೇಪು ಹಾಕಿಕೊಂಡು ಶಬ್ದ ಮಾಲಿನ್ಯ ಉಂಟು ಮಾಡಿದಲ್ಲಿ, ಅನವಶ್ಯಕ ದೀಪಗಳನ್ನು ಹಾಕಿಕೊಂಡಲ್ಲಿ ಅಂಥವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹುಣಸಗಿ ಠಾಣೇಯ ಪಿಎಸ್ಸೆöÊ ಬಾಪುಗೌಡ ಪಾಟೀಲ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss