Sunday, April 11, 2021

Latest Posts

ಆಟೋ ಹರಿಸಿ ವ್ಯಕ್ತಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ

ಹೊಸದಿಗಂತ ವರದಿ,ಮೈಸೂರು:

ಆಟೋ ಹರಿಸಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಮೈಸೂರಿನ ಎನ್.ಆರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಬಿ.ಎಂ.ಶ್ರೀ ನಗರದ ಶ್ರೀಧರ್, ಗೋವಿಂದರಾಜು ಬಂಧಿತ ಆರೋಪಿಗಳು. ಇವರು ರಸ್ತೆ ಬದಿ ನಿಂತಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಆಟೋ ಹತ್ತಿಸಿ ಕೊಲೆಮಾಡಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ಫುಟೇಜ್ ಆದರಿಸಿ ಎನ್.ಆರ್ ಠಾಣೆಯ ಇನ್ ಸ್ಪೆಕ್ಟರ್ ಅಜರುದ್ದೀನ್ ಮತ್ತು ತಂಡದಿoದ ಆರೋಪಿಗಳ ಬಂಧಿಸಲಾಗಿದೆ.

ಬoಧಿತರ ವಿಚಾರಣೆ ಸಂದರ್ಭ ಕುಡಿದ ಮತ್ತಿನಲ್ಲಿ ಹಣಕಾಸಿನ ವಿಚಾರವಾಗಿ ಚಾಲಕನಾದ ಮಲ್ಲಿಕಾರ್ಜುನನೊಂದಿಗೆ ಆತನ ಸ್ನೇಹಿತ ಶ್ರೀಧರ್ ಜಗಳವಾಡಿದ್ದರು. ಈ ದ್ವೇಷದಿಂದ ಶ್ರೀಧರ್ ಮತ್ತೋರ್ವ ಸ್ನೇಹಿತ ಗೋವಿಂದರಾಜು ಕರೆಯಿಸಿ, ಮಲ್ಲಿಕಾರ್ಜುನನ್ನ ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿಡಿರುವ ಎನ್.ಆರ್ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss