Wednesday, January 20, 2021

Latest Posts

ಆತ್ಮನಿರ್ಭರ ಭಾರತಕ್ಕೆ ‘ಪಕ್ಕದಂಗಡಿ’ ನೀಡುತ್ತಿದೆ ಸಾಥ್!

ದಿಗಂತ ವರದಿ, ಸುಬ್ರಹ್ಮಣ್ಯ

ಸ್ಥಳೀಯವಾದ ಸ್ವದೇಶಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ಗ್ರಾಮೀಣ ಭಾಗ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆರಂಭವಾದ ವಿನೂತನ ಪರಿಕಲ್ಪನೆಯೇ ಪಕ್ಕದಂಗಡಿ.!

ಸ್ವದೇಶಿ ವಸ್ತುಗಳನ್ನು ಮಾರಾಟಕ್ಕೆ ಒತ್ತು ನೀಡಿ, ಇದು ಸ್ಥಳೀಯ ಗ್ರಾಹಕರನ್ನು ಬೆಸೆಯುವ ವಿನೂತನ ವ್ಯವಸ್ಥೆ ಇದಾಗಿದೆ. ಮೊಬೈಲ್, ವಾಟ್ಸ್ ಆಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮೂಲಕ ನೇರ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿಯೇ ಖರೀದಿಗೆ ವೇದಿಕೆ ನಿರ್ಮಿಸಿಕೊಡಲಾಗಿದ್ದು, ಇದು ಗ್ರಾಮೀಣರ ಸ್ವಾವಲಂಬಿ ಜೀವನಕ್ಕೆ ‘ಪಕ್ಕದಂಗಡಿ’ ಸಹಕಾರಿ ಆಗಲಿದೆ.

ಚೀನಿ ವಸ್ತುಗಳಿಗೆ ಬಹಿಷ್ಕಾರ!: ಕೊರೋನಾ ಮಹಾಮಾರಿಯು ಹಲವರ ಜೀವನದಲ್ಲಿ ಬದಲಾವಣೆಯನ್ನು ತಂದು ಬಿಟ್ಟಿದೆ. ಬಹಳ ಜನರು ಊರಲ್ಲೇ ನೆಲೆ ನಿಂತು ವ್ಯವಹಾರ ಆರಂಭಿಸುವ ನಿರ್ಧಾರಕ್ಕೆ ಬಂದರು. ಇದರ ಜೊತೆಗೆ ಚೀನಿ ವಸ್ತುಗಳ ಬಹಿಷ್ಕಾರ ಹಾಗೂ ಸ್ವದೇಶಿ ವಸ್ತುಗಳ ಬಳಕೆಯ ಮನೋಭಾವ ಸ್ವದೇಶಿ ವಸ್ತುಗಳ ಬಗೆಗೆ ಹೆಚ್ಚಿನ ಒಲವು ಮೂಡಿತ್ತು. ಅಲ್ಲದೇ ನೂತನ ಉದ್ಯಮಕ್ಕೆ ಪ್ರೇರಣೆ ನೀಡಿತು ಎನ್ನುತ್ತಾರೆ ಯುವ ಉದ್ಯಮಿ ನಿತೀನ್ ನೂಚಿಲ.

ಇವರ ‘ಪಕ್ಕದಂಗಡಿ’ ಎಂಬ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿ, ಸಾಮಾಜಿಕ ಜಾಲತಾಣಗಳ ಮೂಲಕ ವಸ್ತುಗಳ ಬಗೆಗೆ ಮಾಹಿತಿ ನೀಡುವ ವ್ಯವಸ್ಥೆಯನ್ನು ಅವರು ಜಾರಿಗೊಳಿಸಿದರು.

ವಾಟ್ಸ್‌ಆಪ್, ಫೇಸ್‌ಬುಕ್ ಬಳಕೆ!: ‘ಪಕ್ಕದಂಗಡಿ’ ಗ್ರಾಹಕ ಮತ್ತು ಪೂರೈಕೆದಾರರನ್ನು ಪಾರದರ್ಶಕವಾಗಿ ಒಟ್ಟು ಸೇರಿಸುವ ವ್ಯವಸ್ಥೆಯಾಗಿದೆ. ಇದಕ್ಕಾಗಿ ಅತ್ಯಧಿಕ ಸಂಖ್ಯೆಯಲ್ಲಿ ಸ್ಥಳೀಯರ ಬಳಗವನ್ನು ಸೇರಿಸಿ, ವಾಟ್ಸ್‌ಆಪ್ ಗ್ರೂಪ್ ಹಾಗೂ ಫೇಸ್‌ಬುಕ್ ಪೇಜ್‌ಗಳಲ್ಲಿ ತಮ್ಮ ಉತ್ಪನ್ನಗಳನ್ನು ಪ್ರಚಾರ ಪಡಿಸಿ, ಗ್ರಾಹಕರನ್ನು ಸೆಳೆಯುವ ಕಾರ್ಯವನ್ನು ಈ ತಂಡ ಮಾಡುತ್ತದೆ. ಪಕ್ಕದಂಗಡಿಯಲ್ಲಿ ಎಲ್ಲಾ ಸ್ಥಳೀಯ ಸೇವೆಗಳು, ಸರಕುಗಳು ಲಭ್ಯವಿದೆ.

ಯಾವುದೇ ವಸ್ತುಗಳು ಬೇಕಾದಲ್ಲಿ ಪಕ್ಕದಂಗಡಿಗೆ ಮೆಸೇಜ್ ಮಾಡಿದರೆ ಆವಶ್ಯಕ ಆಯ್ಕೆಗಳು ಮತ್ತು ವಿತರಕರ ಸಂಪರ್ಕ ಬೆರಳ ತುದಿಯಲ್ಲಿ ಲಭ್ಯವಾಗುತ್ತದೆ. ವಸ್ತುಗಳ ನಿಖರ ಬೆಲೆ ಗುಂಪಿನಲ್ಲಿ ವಿತರಕರು ಬಿತ್ತರಿಸುವ ಕಾರಣ ಆವಶ್ಯಕ ಗ್ರಾಹಕರು ದರಗಳ ಗೊಂದಲವಿಲ್ಲದೆ ಖರೀದಿಗೆ ಸುಲಭವಾಗುತ್ತಿತ್ತು.

ಸಾವಯವ ತರಕಾರಿ, ಹಾಳೆ ತಟ್ಟೆ, ಮುಟ್ಟಾಳೆ, ತುಪ್ಪ, ಜೇನು, ಗೆರೆಟೆ ಸೌಟ್‌ಗಳು, ನರ್ಸರಿ ಗಿಡಗಳು, ಕಾಫಿ, ಚಾ ಹುಡಿ, ಮಸಾಲೆ ಪದಾರ್ಥ, ಉಪ್ಪಿನಕಾಯಿ, ಊರಿನ ಕೋಳಿ, ಹೂವಿನ ಗಿಡ, ತರಕಾರಿ ಗಿಡ, ಬಾಡಿಗೆ ಕೊಠಡಿಗಳು, ವಾಹನ ಪಿಟ್ಟರ್, ಬೆಲ್ಲ, ಜೋಣೆ ಬೆಲ್ಲ, ಓಲೆ ಬೆಲ್ಲ, ಉಪ್ಪಿನಕಾಯಿ, ಹಪ್ಪಳ, ಸೀರೆ, ಆಟಿಕೆಗಳು, ಆಲಂಕಾರಿಕಾ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು, ಬುಟ್ಟಿಗಳು, ಮಣ್ಣಿನ ಮಡಕೆಗಳು, ಇಟ್ಟಿಗೆಗಳು, ಸಾವಯವ ಬೆಲ್ಲ, ತರಕಾರಿ, ಕುಂಕುಮ, ಅರಸಿನ, ಹಳೆಯ ವಾಹನ, ಮಕ್ಕಳ ಆಟಿಕೆಗಳು, ಸಾಬೂನು, ಬಿಂದಿ, ಬಳೆ, ಚಾಪೆ ಈ ರೀತಿಯಾಗಿ ಇನ್ನಷ್ಟು ಅಸಂಖ್ಯಾತ ವಸ್ತುಗಳು ಇಲ್ಲಿ ಲಭ್ಯವಾಗಲಿದೆ.

ಎಲ್ಲವೂ ಇಲ್ಲಿ ಲಭ್ಯ!: ‘ಪಕ್ಕದಂಗಡಿ’ ಸಾಮಾಜಿಕ ಜಾಲತಾಣ ಮೂಲಕ ಸಾವಯವ ತರಕಾರಿ, ಹಾಳೆ ತಟ್ಟೆ, ಮುಟ್ಟಾಳೆ, ತುಪ್ಪ, ಜೇನು, ಗೆರೆಟೆ ಸೌಟ್‌ಗಳು, ನರ್ಸರಿ ಗಿಡಗಳು, ಕಾಫಿ, ಚಾ ಹುಡಿ, ಮಸಾಲೆ ಪದಾರ್ಥ, ಉಪ್ಪಿನಕಾಯಿ, ಊರಿನ ಕೋಳಿ, ಹೂವಿನ ಗಿಡ, ತರಕಾರಿ ಗಿಡ, ಬಾಡಿಗೆ ಕೊಠಡಿಗಳು, ವಾಹನ ಪಿಟ್ಟರ್, ಬೆಲ್ಲ, ಜೋಣೆ ಬೆಲ್ಲ, ಓಲೆ ಬೆಲ್ಲ, ಉಪ್ಪಿನಕಾಯಿ, ಹಪ್ಪಳ, ಸೀರೆ, ಆಟಿಕೆಗಳು, ಅಲಂಕಾರಿಕಾ, ಎಲೆಕ್ಟ್ರಾನಿಕ್ ವಸ್ತುಗಳು, ಇಟ್ಟಿಗೆಗಳು ಸೇರಿದಂತೆ ಎಲ್ಲ ವಸ್ತುಗಳು ಕಡಿಮೆ ದರದಲ್ಲಿ ಇಲ್ಲಿ ಸಿಗಲಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!