Tuesday, August 16, 2022

Latest Posts

ಆತ್ಮನಿರ್ಭರ ಯೋಜನೆಯಡಿ ಸಾವಯವ ಬೆಲ್ಲ ತಯಾರಿಕೆಗೆ ಒತ್ತು: ಸಚಿವ ಎಸ್.ಟಿ. ಸೋಮಶೇಖರ್

ಮಂಡ್ಯ : ಆತ್ಮನಿರ್ಭರ ಯೋಜನೆಯಡಿ ಸಹಕಾರ ಇಲಾಖೆ ವತಿಯಿಂದ ಆರ್ಥಿಕ ಸ್ಪಂದನ ಕಾರ್ಯಕ್ರಮ ರೂಪಿಸಿದ್ದು, ಮೈಸೂರು ವಿಭಾಗದಲ್ಲಿರುವ ಆಲೆಮನೆಗಳು ಸೇರಿದಂತೆ ಇತರೆ ಸಹಕಾರ ಸಂಸ್ಥೆಗಳ ಪುನಶ್ಚೇನದೊಂದಿಗೆ ಸಾವಯವ ಬೆಲ್ಲ ತಯಾರಿಕೆಗೆ ಕ್ರಮ ವಹಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಎಪಿಎಂಸಿ ಮುಂಭಾಗದಲ್ಲಿರುವ ಗುರು ಅವರ ಆಲೆಮನೆಗೆ ಭೇಟಿ ನೀಡಿ ಬೆಲ್ಲ ತಯಾರಿಕೆ ಕುರಿತು ಪರಿಶೀಲನೆ ನಡೆಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಆತ್ಮನಿರ್ಭರ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ 20 ಲಕ್ಷ ಕೋಟಿ ಅನುದಾನ ನೀಡಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಗಳವಾರವಷ್ಟೇ ಚಾಲನೆ ನೀಡಿದ್ದಾರೆ. ಈ ಅನುದಾನದಲ್ಲಿ ಸಹಕಾರ ಇಲಾಖೆ ಏನೆಲ್ಲಾ ಕಾರ್ಯಕ್ರಮ ರೂಪಿಸಬಹುದು ಎಂಬುದರ ಕುರಿತು ಅಧಿಕಾರಿಗಳೊಟ್ಟಿಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಅದರ ಭಾಗವಾಗಿ ಸಾವಯವ ಬೆಲ್ಲ ತಯಾರಿಕಾ ಘಟಕಗಳಿಗೂ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿದ್ದು, ಈ ಬಗ್ಗೆ ಖುದ್ದು ಪರಿಶೀಲನೆ ನಡೆಸಿ, ಮಾಲೀಕರು, ಕಾರ್ಮಿಕರು, ಕೃಷಿ ತಜ್ಞರು, ಅಧಿಕಾರಿಗಳೊಟ್ಟಿಗೆ ಸಮಾಲೋಚನೆ ನಡೆಸಿ ಸಾಲ ಸೌಲಭ್ಯ ವಿತರಣೆ, ಪುನಶ್ಚೇತ, ಮಾರುಕಟ್ಟೆ ಎಲ್ಲದರ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.
ಸಹಕಾರ ಇಲಾಖೆಯಡಿ ರೂಪಿತವಾಗಿರುವ ಸಣ್ಣ ಮತ್ತು ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ 8 ಸಾವಿರ ರೂ.ಗಳಿಂದ 4.50 ಲಕ್ಷ ರೂ.ಗಳವರೆಗೆ ಸಾಲ ನೀಡಲು ನಿರ್ಧರಿಸಲಾಗಿದೆ. ಪರಿಶಿಷ್ಟ ಜಾತಿ, ವರ್ಗದವರಿಗೆ 10 ಸಾವಿರ ರೂ. ಸಾಲ ನೀಡಲಾಗುತ್ತಿದೆ. ಹೈನುಗಾರಿಕೆಗೆ 2 ಲಕ್ಷ, ಮೀನುಗಾರಿಕೆಗೆ 3 ಲಕ್ಷ, ಆಲೆ ಮನೆಯಲ್ಲಿ ಯಾವ ರೀತಿಯಲ್ಲಿ ಆರ್ಥಿಕ ಸಹಾಯ ಮಾಡಬಹುದು ಎಂಬುದರ ಕುರಿತು ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss