Wednesday, July 6, 2022

Latest Posts

ಆದಿಚುಂಚನಗಿರಿ ಮಹಾ ಸಂಸ್ಥಾನ ವತಿಯಿಂದ ಡಿ.24 ರಂದು ವಿಶ್ವಮಾನವ ದಿನಾಚರಣೆ

ಹೊಸದಿಗಂತ  ವರದಿ,ರಾಮನಗರ:

ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ವತಿಯಿಂದ ಡಿ.24 ರಂದು ನಗರದಲ್ಲಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಆದಿಚುಂಚನಗಿರಿಶಾಖಾ ಮಠದ ಶ್ರೀಅನ್ನಧಾನೇಶ್ವರ ಸ್ವಾಮೀಜಿ ಹೇಳಿದರು.

ಶಾಖಾ ಮಠದಲ್ಲಿ ಮಾಧ್ಯಮ ಗಳೊಂದಿಗೆ ಮಾತನಾಡಿದ ಅವರು, ವಿಶ್ವಮಾನವ ಪ್ರವರ್ಧಕ ರಾಷ್ಟçಕವಿ ಕುವೆಂಪು ಅವರ ಜನ್ಮ ದಿನವನ್ನು ಸರ್ಕಾರ ‘ವಿಶ್ವಮಾನವ ದಿನ’ವನ್ನಾಗಿ ಘೋಷಣೆ ಮಾಡಿರುವುದರಿಂದ ಇದು ಸಮುದಾಯಕ್ಕೆ ಮತ್ತು ಮಠಕ್ಕೆ ಹೆಗ್ಗಳಿಕೆಯಾಗಿದೆ. ಇದರಿಂದ ಆಧಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ನಿರ್ದೇಶನದಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ವಿಶ್ವಮಾನವ ದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ನಗರದ ಆರ್‌ವಿಸಿಎಸ್ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆಧಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮಿ ವಹಿಸಲಿದ್ದಾರೆ. ಸಾಹಿತಿ ಎಲ್.ಎನ್. ಮುಕುಂದರಾಜ್ ಅವರು ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ ಬಗ್ಗೆ ಮಾತನಾಡಲಿದ್ದಾರೆ. ಡಾ.ಬೈರಮಂಗಲ ರಾಮೇಗೌಡ ಅವರು ರಾಮಾಯಣ ದರ್ಶನಂ ಕುರಿತು ಮತ್ತು ಪ್ರೊ. ಚಂದ್ರಶೇಖರ ನಂಗಲಿ ಅವರು ಕುವೆಂಪು ಕಾವ್ಯಗಳ ಶ್ರೀಮಂತಿಕೆ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ. ಬೆಂಗಳೂರಿನ ಪದ್ಮಿನಿ ಅಚ್ಚಿ ಕಲಾವಿದರಿಂದ ಕುವೆಂಪು ಕವನ ನಾಟ್ಯ ನಮನ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss